janadhvani

Kannada Online News Paper

ಎಸ್ಸೆಸ್ಸಫ್ ಪ್ರತಿನಿಧಿ ಸಮಾವೇಶ ಮತ್ತು ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಸ್ವಾಗತ ಸಮಿತಿ ರಚನೆ.

ಬೆಂಗಳೂರು ನ- 10 : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಇದರ ರಾಜ್ಯ ಪ್ರತಿನಿಧಿ ಸಮಾವೇಶ ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಮಿಟಿ ಘೋಷಣಾ ಸಮಾರಂಭದ ಸ್ವಾಗತ ಸಮಿತಿಯು ಇಂದು ಬೆಂಗಳೂರಿನ ಹಜ್ ಕಮಿಟಿಯ ಎಸ್ಸೆಸ್ಸಫ್ ಕೇಂದ್ರ ಕಛೇರಿಯಲ್ಲಿ ನಡೆಯಿತು.


ರಾಜ್ಯ ಎಸ್ಸೆಸ್ಸಫ್ ನ ಐದು ಸಾವಿರ ಆಯ್ದ ಪ್ರತಿನಿಧಿಗಳ ಸಮಾವೇಶವು ಬರುವ ವರ್ಷ ಜನವರಿ 26, 27 ರಂದು ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ. ಸದ್ರಿ ಸಮಾವೇಶದಲ್ಲಿ ಎರಡು ದಿನಗಳಲ್ಲಿ ವಿವಿಧ ವಿಚಾರಗಳಲ್ಲಿ ವಿಚಾರಗೋಷ್ಠಿಗಳು, ಸೆಮಿನಾರ್ ಗಳು ನಡೆಯಲಿದೆ. ದೇಶ, ವಿದೇಶದ ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ಸೆಮಿನಾರ್ ಮತ್ತು ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.
ಜನವರಿ 27 ರ ಸಾಯಂಕಾಲ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಘೊಷಣೆಯನ್ನು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅಧಿಕೃತವಾಗಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹಲವು ನಾಯಕರು ಭಾಗವಹಿಸಲಿದ್ದಾರೆ.
ಸದ್ರಿ ಕಾರ್ಯಕ್ರಮದ ಸ್ವಾಗತ ಸಮಿತಿಯು ಇಂದು ಜಾಮಿಅ ಸಅದಿಯ್ಯಾ ಅರಬಿಯ್ಯಾ ಕಾಸರಗೋಡು ಇದರ ಅಧ್ಯಕ್ಷರಾದ ಕೆ.ಎಸ್ ಆಟಕೋಯ ತಂಙಲ್ ಕುಂಬೋಳ್ ನಾಯಕತ್ವದಲ್ಲಿ ರಚಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜನಾಬ್ ಎಸ್ ಎಸ್ ಎ ಖಾದರ್ ಹಾಜಿ, ಜನರಲ್ ಕನ್ವೀನರ್ ಎನ್.ಕೆ. ಎಂ ಶಾಫಿ ಸ ಅದಿ ಬೆಂಗಳೂರು, ಫೈನಾನ್ಸ್ ಸೆಕ್ರಟರಿ ಉಮರ್ ಹಾಜಿ, ಕೋರ್ಡಿನೇಟರ್ ಮುಹಮ್ಮದ್ ಶೆರೀಫ್ ಸಮೇತವಿರುವ 101 ಸದಸ್ಯರ ಸ್ವಾಗತ ಸಮಿತಿಗೆ ರೂಪು ಕೊಡಲಾಯಿತು.

error: Content is protected !! Not allowed copy content from janadhvani.com