ಶಿವಮೊಗ್ಗ: ಕೆ.ಸಿ.ಎಫ್ ದಶವಾರ್ಷಿಕ ಪ್ರಚಾರ ಸಭೆ ಶಿವಮೊಗ್ಗ ಸಾಗರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಜನಾಬ್ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಕೆ.ಸಿ.ಎಫ್ ಕಾರ್ಯಾಚರಣೆ ಮತ್ತು ಅದರ ಚಟುವಟಿಕೆಗಳ ಕುರಿತು ಸಭೆಯ ಗಮನ ಸೆಳೆದರು.
ಹತ್ತು ವರ್ಷಗಳ ಮೊದಲು ಅನಿವಾಸಿ ಕನ್ನಡಿಗರಿಗೆ ಒಂದು ಗೂಡುವ ಸುಸಜ್ಜಿತ ಸಂಘಟನಾ ವ್ಯವಸ್ಥೆ ಇರಲಿಲ್ಲ, ಕೆ.ಸಿ.ಎಫ್ ಆ ಕೊರತೆ ನೀಗಿಸಿದೆ. ಹತ್ತಕ್ಕೂ ಮಿಕ್ಕ ಗಲ್ಫ್ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರನ್ನು ಒಂದು ವೇದಿಕೆಯಲ್ಲಿ ಧಾರ್ಮಿಕವಾಗಿ , ಸಾಂಸ್ಕೃತಿಕವಾಗಿ , ಸಾಮಾಜಿಕ,ಶೈಕ್ಷಣಿಕವಾಗಿ ಒಂದುಗೂಡಿಸಿದೆ. ಉಲಮಾ ನಾಯಕತ್ವದ ಈ ಸುಸಜ್ಜಿತ ಅನಿವಾಸಿ ಸಂಘಟನೆಗೆ ಸರಿಸಾಠಿಯಾಗಿ ಕೆ.ಸಿ.ಎಫ್ ಮಾತ್ರ ನಮ್ಮ ಮುಂದೆ ಇದೆ ಎಂಬ ಅಭಿಪ್ರಾಯ ವ್ಮಕ್ತಪಡಿಸಿದರು.
ಹಜ್ಜ್ ಯಾತ್ರೆಗೆ ತೆರಳುವ ಕನ್ನಡಿಗರ ಸೇವೆಯಲ್ಲಿ ಕೆ.ಸಿ.ಎಫ್ ಮುಂಚೂಣಿಯಲ್ಲಿದೆ, ಒಬ್ಬ ನಾಯಕರು ಸಂಸ್ಥೆ ಕಟ್ಟಬಹುದು, ಮುನ್ನಡೆಸಬಸುದು, ಆದರೆ ಕೆ.ಸಿ.ಎಫ್ ಸಂಘಟನೆಯೇ ಇಹ್ಸಾನ್ ಚಳುವಳಿಗೆ ಭದ್ರ ಬುನಾದಿ ಹಾಕಿ ಶಿಕ್ಷಣ ಚಳುವಳಿ ನಡೆಸುತ್ತಿದೆ, ಇದು ಮಾದರೀಯೋಗ್ಯ ಸಂಘಟನೆಯ ಶಿಕ್ಷಣ ಕ್ರಾಂತಿ ಉತ್ತರ ಕರ್ನಾಟಕದಲ್ಲಿ ಕಾಣುತ್ತಿದೆ. ಇಹ್ಸಾನ್ ಮೂಲಕ ಹತ್ತಾರು ಸಂಸ್ಥೆಗಳು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದೆ, ನೀಡುತ್ತಿದೆ. ಇನ್ನು ಕೋವಿಡ್ ಸಂದರ್ಭ ,ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದವರನ್ನು ಕೆ.ಸಿ.ಎಫ್ ಸುಸಜ್ಜಿತ ವಾಗಿ ಊರಿಗೆ ತಲುಪಿಸಲು ಪ್ರತ್ಯೇಕ ವಿಮಾನಗಳ ವ್ಯವಸ್ಥೆ ಮಾಡಿಕೊಟ್ಟಿದೆ. ಜಾತಿ ಧರ್ಮ ಭೇದವಿಲ್ಲದೆ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಸೇವೆ ಮಾಡಿ ಮನಗೆದ್ದ ಅಧ್ಭುತ ಸಂಘಟನಾ ಚಳುವಳಿಯಾಗಿದೆ ಕೆ.ಸಿ.ಎಫ್ . ಈ ರೀತಿ ಕೆ.ಸಿ.ಎಫ್ ಚಳುವಳಿಯನ್ನು ಸುದೀರ್ಘ ವಾಗಿ ಪ್ರಶಂಸಿಸಿ ಪರಿಚಯಿಸಿದರು. ಮತ್ತು ವಿವಿಧ ಕಾರ್ಯಕ್ರಮ ಮೂಲಕ ಮೇ 19ಮಂಗಳೂರಿನಲ್ಲಿ ನಡೆಯುವ ದಶವಾರ್ಷಿಕ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದರು.
ಕಾರ್ಯಕ್ರಮದಲ್ಲಿ ಸಯ್ಯದ್ ಸಿದ್ದಿಕ್ ತಂಙಲ್, ಸಯ್ಯದ್ ಶಿಹಾಬುದ್ದೀನ್ ತಂಙಲ್, ಇಹ್ಸಾನ್ ನಾಯಕರಾದ ಶಾಹುಲ್ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಕೋಟೆ ಗದ್ದೆ, ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಮುಹಮ್ಮದ್ ಹಾಜಿ ಸಾಗರ್ ಮತ್ತು ಶಿವಮೊಗ್ಗ ಜಿಲ್ಲಾ ಎಸ್ ಎಸ್ ಎಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್ ನಾಯಕರು ಭಾಗಿಯಾದರು