ಅಬುಧಾಬಿ: ಯುಎಇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಲೆ. ಮುಹಮ್ಮದ್ ಉಬೈದ್ ಮುಬಾರಕ್, ಲೆ. ಸೌದ್ ಖಮೀಸ್ ಅಲ್ ಹೊಸನಿ ಕಾರು ಅಪಘಾತದಲ್ಲಿ ನಿಧನರಾದರು.
ಶುಕ್ರವಾರ ಪೊಲೀಸರು ಮರಣ ವಿವರವನ್ನು ಬಹಿರಂಗ ಪಡಿಸಿದ್ದಾರೆ. ಅಬುಧಾಬಿಯ ಶೈಖ್ ಝಾಯಿದ್ ಸುರಂಗದಲ್ಲಿ ವಾಹನ ಸ್ಥಗಿತದ ಬಗ್ಗೆ ತನಿಖೆ ನಡೆಸಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಅಬುಧಾಬಿ ಪೊಲೀಸ್ ಜನರಲ್ ಕಮಾಂಡ್ ಮಾಹಿತಿ ನೀಡಿದೆ.
ಮರಣಾನಂತರ, ಇಬ್ಬರಿಗೂ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ನೀಡಲಾಯಿತು. ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವ ಲೆಫ್ಟಿನೆಂಟ್ ಜನರಲ್ ಶೈಖ್ ಸೈಫ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ಮೃತ ಅಧಿಕಾರಿಗಳ ಸಂಬಂಧಿಕರಿಗೆ ಕರ್ತವ್ಯದ ಪದಕವನ್ನು ಹಸ್ತಾಂತರಿಸಿದರು. ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಅವರು ತೋರಿದ ಸ್ವಾರ್ಥ ಮನೋಭಾವ ಶ್ಲಾಘನೀಯ ಎಂದು ಹೇಳಿದರು.