✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಅದು ಪುಟ್ಟ ಊರು. ಬಡವರೇ ಅಧಿಕ ಇರುವ ನಾಡು. ಸಂತ ಪುರುಷರೊಬ್ಬರ ಪಾದಸ್ಪರ್ಶದಿಂದ ಧನ್ಯ ಗೊಂಡ ಪ್ರದೇಶ.ಕುಗ್ರಾಮವಾದ ಆ ನಾಡು “ಇಲ್ಮ್” ಮೂಲಕ ಇಡೀ ಊರಿಗೆ ಪ್ರಕಾಶ ಭೀರಬಹುದೆಂದು ಆ ಊರಿನವರು ಕನಸಲ್ಲೂ ನಿರೀಕ್ಷಿಸಿರಲಿಕ್ಕಿಲ್ಲ.
ಅಲ್ಲಾಹನ ಇಚ್ಚೆ. ಆ ಊರಿಂದು ಅಲ್ಲಾಹನ ಪ್ರಕಾಶವಾದ ಶಿಕ್ಷಣ ವನ್ನು ಪಸರಿಸುವ ಕೇಂದ್ರ ವಾಗಿ ಮಾರ್ಪಟ್ಟಿದೆ. ಹಲವಾರು ವಿದ್ವಾಂಸರು ಆ ಮಣ್ಣಿನಲ್ಲಿ ಬಿರುದು ಪಡೆದು ವಿವಿಧ ಕಡೆ ಧಾರ್ಮಿಕ ಪ್ರಬೋಧನೆ ಗಿಳಿದಿದ್ದಾರೆ. ದಾರುಲ್ ಇರ್ಶಾದ್ ಬಿಟ್ಟರೆ ಲಕ್ಷಾಂತರ ರೂಪಾಯಿಯ ಇಸ್ಲಾಮಿಕ್ ಖುತುಬ್ ಖಾನ ಈ ಊರಲ್ಲಿದೆ.
ಅರವತ್ತು ಖುರ್‌ಆನ್ ತಫ್ಸೀರ್,ಹದೀಸ್ ವ್ಯಾಖ್ಯಾನ ಗ್ರಂಥ, ಶಾಫಿಈ ಮದ್ಸ್‌ಹಬ್‌ನ ಎಲ್ಲಾ ಫಿಕ್ಹ್ ಗ್ರಂಥಗಳು, ನೂರಾರು ಇಮಾಮರು ತವಸ್ಸುಲ್ ಇಸ್ತಿಗಾಸ ನಡೆಸಿದ ಚರಿತ್ರೆ ಗ್ರಂಥ ಗಳ ಸಹಿತ ಸಾವಿರಾರು ಗ್ರಂಥಗಳು ಖುತುಬ್‌ಖಾನ ದಲ್ಲಿ ಅಡಕವಾಗಿದೆ. ಸಮಕಾಲೀನವಾಗಿ ಯಾವ ಚರ್ಚೆಗಳು ಬಂದರೂ ಅದನ್ನು ಗ್ರಂಥಗಳ ಆಧಾರದಲ್ಲಿ ತಿಳಿಯಲು,ಕಲಿಯಲು ವಿವಿಧ ಕಡೆಯ ವಿದ್ವಾಂಸರು ಈ ಪುಟ್ಟ ಊರಿನತ್ತ ಬರುತ್ತಿದ್ದಾರೆ.
ಇಲ್ಮ್ ನಿಂದ,ಉಲಮಾ ಶಿರೋಮಣಿಗಳಿಂದ ಅದೃಷ್ಟ ಗೊಂಡ ಆ ಊರಿನವರಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಬೇರೇನು ಬೇಕು. ನಿಜಕ್ಕೂ ಆ ಊರಿನವರು ಪುಣ್ಯವಂತರು.
ನಚ್ಚಬೆಟ್ಟು ಎಂಬ ಆ ಪುಟ್ಟ ಊರು ಈ ಎಲ್ಲಾ ಭಾಗ್ಯ ಪಡೆಯಲು ಕಾರಣ ಕರ್ನಾಟಕದ ಅನುಗ್ರಹೀತ ವಿದ್ವಾಂಸ,ಕನ್ನಡಿಗ ಮುಸ್ಲಿಮರ ಕಣ್ಮಣಿ, ಸುನ್ನತ್ ಜಮಾಅತ್‌ನ ಆವೇಶ, ಫಿಕ್ಹ್‌ನ ದೊರೆ ಮುಹ್‌ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು.ಉಸ್ತಾದರು ಎಂಟು ವರ್ಷಗಳ ಹಿಂದೆ ನಚ್ಚಬೆಟ್ಟು ಎಂಬ ಕುಗ್ರಾಮಕ್ಕೆ ಕಾಲಿಟ್ಟಾಗಲೇ ಆ ಊರು ಧನ್ಯಗೊಂಡಿತ್ತು.ಹಳ್ಳಿಯನ್ನು ಬೆಳಗಿಸಿದ ಉಸ್ತಾದರ ಕ್ರಾಂತಿಯನ್ನು ಕಂಡು ಹಲವರು ಮೂಗಿಗೆ ಬೆರಳಿಟ್ಟರು.
ಸಾಧಾರಣ ಸಂಸ್ಥೆಗಳಿಗೆ ಸಮಿತಿಗಳಿರುತ್ತದೆ. ಆ ಸಮಿತಿಗಳು ಸಂಸ್ಥೆಯ ಎಲ್ಲಾ ಜವಾಬ್ದಾರಿ ಗಳನ್ನು ವಹಿಸಿಕೊಳ್ಳುತ್ತವೆ. ಆದರೆ, ಉಸ್ತಾದ್ ಹಾಗಲ್ಲ. ಸಂಸ್ಥೆಯ ಜವಾಬ್ದಾರಿ ಯನ್ನು ಸ್ವತಃ ಹೊತ್ತು ಕೊಂಡು ಓಡಾಡಿದರು.
ಅದರ ನಡುವೆ ದರ್ಸ್ ಕಲಿಸಲು, ಗ್ರಂಥಗಳ ಅಧ್ಯಯನ, ಸಂಘಟನೆ ಚಟುವಟಿಕೆ, ತನ್ನತ್ತ ಬರುವ ನೂರಾರು ಜನರ ಧಾರ್ಮಿಕ ಸಮಸ್ಯೆ ಪರಿಹಾರದ ಹೊರೆಯನ್ನೂ ನಿರ್ವಹಿಸಿದರು. ಉಸ್ತಾದರ ಏಕಾಂತ ಹೋರಾಟದ ಫಲವಾಗಿ ನಚ್ಚಬೆಟ್ಟಿವಿನಲ್ಲಿ ತಲೆಯೆತ್ತಿ ನಿಂತ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ರಾಜ ಗಾಂಭೀರ್ಯ ದಿಂದ ಎಂಟನೇ ವಾರ್ಷಿಕೋತ್ಸವ ಆಚರಿಸಲು ಸನ್ನದ್ಧವಾಗಿ ನಿಂತಿದೆ. ಸುಲ್ತಾನಿಗಳ ಸಹಿತ ನೂರಾರು ಪುರ್ಖಾನಿ ಬಿರುದು ದಾರಿಗಳು ಸನದ್ ಪಡೆಯಲು ಸಿದ್ಧರಾಗಿದ್ದಾರೆ. ಶೈಖುನಾ ಸುಲ್ತಾನುಲ್ ಉಲಮಾ, ಶೈಖುನಾ ಪೆರೋಡ್ ಉಸ್ತಾದರಂತಹ ಅತಿರಥ ಮಹಾರಥರ ಸ್ಪರ್ಶ ದಿಂದ ಪುನೀತ ಗೊಂಡಿರುವ ನಚ್ಚಬೆಟ್ಟು ವಿನ ಮಣ್ಣು ಸಯ್ಯಿದ್ ಖಲೀಲ್ ತಂಙಳ್ ಕಡಲುಂಡಿ, ಸಯ್ಯಿದ್ ಕೂರ ತಂಙಳ್ ಸಹಿತ ಹಲವು ಸಾದಾತುಗಳಿಂದ,ಉಲಮಾಗಳಿಂದ ಅದೃಷ್ಟಗೊಳ್ಳಲು ಮತ್ತೊಮ್ಮೆ ಸಜ್ಜಾಗಿದೆ. ಈ ಅವಿಸ್ಮರಣೀಯ ಕ್ಷಣಗಳಲ್ಲಿ ನೀವೂ ಭಾಗಿಯಾಗಿರಿ. ನಚ್ಚಬೆಟ್ಟು ವಿನ ಅನುಗ್ರಹೀತ ಮಣ್ಣು ಈ ಸಮಾವೇಶಕ್ಕಾಗಿ ನಿಮ್ಮನ್ನು ಕರೆಯುತ್ತಿದೆ.
ಇದೇ ಬರುವ ಮೇ 16/17/18 ಈ ಮೂರು ದಿನಗಳಲ್ಲಿ ನಡೆಯುವ ಐತಿಹಾಸಿಕ ಸಮ್ಮೇಳನದಲ್ಲಿ ನೀವು ಪಾಲ್ಗೊಳ್ಳಿರಿ. ತಮಗಿದೋ ಪ್ರೀತಿಯ ಆಹ್ವಾನ.