ಕತಾರ್ ನಲ್ಲಿ ಕೆ.ಸಿ.ಎಫ್ ವತಿಯಿಂದ ಇಶ್ಖ್ -ಎ- ಮುಸ್ತಫಾ ಕಾನ್ಫರನ್ಸ್

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ರಾಷ್ಟ್ರೀಯ ಸಮಿತಿಯ ವಯಿಂದ ಇಶ್ಖ್-ಎ-ಮುಸ್ತಫಾ (ಸ.ಅ) ಕಾನ್ಫರನ್ಸ್ ಕಾರ್ಯಕ್ರಮ ನವಂಬರ್ 9 ಶುಕ್ರವಾರ ಜುಮಾ ನಮಾಝಿನ ಬಳಿಕ ದೋಹಾದಲ್ಲಿ ನಡೆಯಿತು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಪುಂಜಾಲಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಸಅದುದ್ದೀನ್ ತಙಳ್ ಶಿವಮೊಗ್ಗ ಉದ್ಘಾಟಿಸಿದರು. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಿದರು.

ಅಲ್ಲಾಹನು ವಿಶ್ವ ಮನುಕುಲಕ್ಕೆ ಅನುಗ್ರಹವಾಗಿ ನಿಯೋಜಿಸಿದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಸ್ಮರಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯ ಹಾಗೂ ಅಲ್ಲಾಹನು ನಮಗೆ ಕರುಣಿಸಿದ ಈ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವುದು ಅಹ್ಲುಸ್ಸುನ್ನತ್ ವಲ್ ಜಮಾಅತ್ ನ ನೈಜ ಆದರ್ಶ ಎಂಬುದನ್ನು ಖುರ್ಆನ್ ಹಾಗೂ ಹದೀಸ್ ಗಳ ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ಆಶಿರ್ವಚನ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಫಿಲ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಮದ್ಹ್ ಆಲಾಪನೆ ನಡೆಯಿತು.

ಅಬ್ದುಲ್ ಜಬ್ಬಾರ್ ಸಅದಿ ಹಂಡುಗುಳಿ, ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಖಾಫಿ ಅಯ್ಯಂಗೇರಿ, ಕಬೀರ್ ದೇರಳಕಟ್ಟೆ, ಮುನೀರ್ ಮಾಗುಂಡಿ, ಅಂದುಮಾಯಿ ನಾವುಂದ, ನಝೀರ್ ಹಾಜಿ ಕಾಟಿಪಳ್ಳ, ಐ.ಸಿ.ಎಫ್ ನೇತಾರರಾದ ಕೆ.ಬಿ ಅಬ್ದುಲ್ಲಾ ಹಾಜಿ, ಕಡವತ್ತೂರ್ ಅಬ್ದುಲ್ಲಾ ಮುಸ್ಲಿಯಾರ್, ಪಾಡಿ ಅಬ್ದುಲ್ಲಾ ಹಾಜಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ಸ್ವಾಗತಿಸಿ ಉಮರ್ ಫಾರೂಕ್ ಕೃಷ್ನಾಪುರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!