janadhvani

Kannada Online News Paper

ಮರಿಕ್ಕಳದಲ್ಲಿ ತಾಜುಲ್ ಫುಖಹಾ ಶೈಖುನಾ ಬೇಕಲ್ ಉಸ್ತಾದರಿಗೆ ಹುಟ್ಟೂರ ಸನ್ಮಾನ

ಮೊಂಟೆಪದವು:ಮರಿಕ್ಕಳ ಜುಮಾ ಮಸ್ಜಿದ್ ಹಾಗೂ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಜುಲ್ ಫುಖಹಾಹ್ ಶೈ ಖುನಾ ಖಾಝಿ ಬೇಕಲ್ ಉಸ್ತಾದರಿಗೆ ಹುಟ್ಟೂರ ಸನ್ಮಾನ ಹಾಗೂ ಯೂನಿಟ್ ಸಮ್ಮೇಳನ ಕಾರ್ಯಕ್ರಮವು ಝೈನುಲ್ ಉಲಮಾ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ವೇದಿಕೆ ಮರಿಕ್ಕಳ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು.

ತಾಜುಶ್ಶರೀಯ: ಶೈಖುನಾ ಅಲೀಕುಂಞಿ ಉಸ್ತಾದ್ ಶಿರಿಯ ತಾಜುಲ್ ಫುಖಹಾಹ್ ಶೈಖುನಾ ಬೇಕಲ್ ಉಸ್ತಾದರನ್ನು ಸನ್ಮಾನಿಸಿ,ಅಭಿನಂದನಾ ಪತ್ರವನ್ನು ನೀಡಿ ಹುಟ್ಟೂರ ಸನ್ಮಾನವನ್ನು ನಡೆಸಿಕೊಟ್ಟರು.

ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಮೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅಭಿನಂದನಾ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸಂದೇಶ ಭಾಷಣ ಮಾಡಿದರು.

ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಅಭಿನಂದನಾ ಪತ್ರವನ್ನು ವಾಚಿಸಿದರು.

ಎಸ್.ಜೆ.ಎಂ ಮೋಂಟುಗೋಳಿ ರೇಂಜ್ ಅಧ್ಯಕ್ಷ ಮುಹಿಯ್ಯದ್ದೀನ್ ಸ ಅದಿ ತೋಟಾಲ್,ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಸಿದ್ದೀಕ್ ಸ ಅದಿ,ತೌಡುಗೋಳಿ ಜುಮಾ ಮಸ್ಜಿದ್ ಖತೀಬ್ ಅಬ್ದುಲ್ ಹಮೀದ್ ಸಖಾಫಿ,ಕಲ್ಮಿಂಜ ಜುಮಾ ಮಸ್ಜಿದ್ ಖತೀಬ್ ಆಶಿರ್ ಸಖಾಫಿ,ಕೊಡಂಚಲ್ ಇಮಾಮ್ ಅನ್ವರ್ ಮರ್ಝೂಕಿ ಸಖಾಫಿ,ಲೆಕ್ಕಸಿರಿ ಜುಮಾ ಮಸ್ಜಿದ್ ಖತೀಬ್ ಅಶ್ರಫ್ ಸಖಾಫಿ,ಅನ್ಸಾರುಲ್ ಹುದಾ ಮಸ್ಜಿದ್ ಗುಂಡುಕಟ್ಟೆ ಇಮಾಮ್ ಅಬೂಬಕ್ಕರ್ ಮದನಿ,ಹಯಾತ್ ನಗರ ಜುಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಸ ಅದಿ,ಪೊಟ್ಟೊಳಿಕೆ ಇಮಾಮ್ ಅಮೀರ್ ಮದನಿ,ಮರಿಕ್ಕಳ ಮದರಸ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ,ಮುಅಲ್ಲಿಂಗಳಾದ ರಮಳಾನ್ ಮದನಿ ಕಂಬ್ಲಬೆಟ್ಟು,ಅಬ್ದುಲ್ ಜಬ್ಬಾರ್ ಸ ಅದಿ, ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು,ಕೋಶಾಧಿಕಾರಿ ಹನೀಫ್ ,ಎಸ್.ವೈ.ಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಮೋಂಟುಗೋಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ ಸ್ವಾಗತಿಸಿದರು.ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಪ್ರಧಾನ ಕಾರ್ಯದರ್ಶಿ ಅಝರ್ ವಂದಿಸಿದರು.

error: Content is protected !! Not allowed copy content from janadhvani.com