janadhvani

Kannada Online News Paper

ಶಾರ್ಜಾ KCF ಅಲ್ ನಹ್‌ದ ಸೆಕ್ಟರ್ ಸಮ್ಮೇಳನ ಮತ್ತು ಸ್ವಲಾತ್ ವಾರ್ಷಿಕ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ನಹ್‌ದ ಸೆಕ್ಟರ್ ಶಾರ್ಜಾ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಸೆಕ್ಟರ್ ಸಮ್ಮೇಳನವು ಮೇ 18 ಶನಿವಾರದಂದು ಸಂಜೆ 8:30 ಕ್ಕೆ ಅಲ್ ನಹ್‌ದ ಅಜ್‌ಮಲ್ ರೆಸ್ಟೋರೆಂಟ್‌ನಲ್ಲಿ ನಡೆಯಲಿದೆ.

KCF ನೇತಾರ ಅನ್ವರ್ ಸುಳ್ಯ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ IC ನಾಲೆಜ್ ಪ್ರೆಸಿಡೆಂಟ್ ಹಮೀದ್ ಸ‌ಅದಿ ಉಸ್ತಾದ್ ಈಶ್ವರಮಂಗಳ ಮುಖ್ಯ ಭಾಷಣಗೈಯಲಿದ್ದಾರೆ ಹಾಗೂ UAE – KCF ಡೆಪ್ಯುಟಿ ಪ್ರೆಸಿಡೆಂಟ್ ಝೈನುದ್ದೀನ್ ಹಾಜಿ ಬೆಳ್ಳಾರೆ ಉದ್ಘಾಟಿಸಲಿದ್ದಾರೆ.

ಕೆಸಿಎಫ್ ಅಲ್‌ನಹ್‌ದ ಸೆಕ್ಟರ್ ಪ್ರೆಸಿಡೆಂಟ್ ಸಯ್ಯಿದ್ ಅಬೂಬಕರ್ ಬುಖಾರಿ ತಂಗಳ್ ಕೋಲ್ಪೆ, ಅಬೂ ಸಾಲಿಹ್ ಸಖಾಫಿ, ಅಝೀಝ್ ಸಖಾಫಿ, ಇಸ್ಮಾಯಿಲ್ ಸಖಾಫಿ, ರಝಾಕ್ ಉಸ್ತಾದ್, ರಫೀಖ್ ಉಸ್ತಾದ್, ನವೀದ್ ಬೆದ್ರ, ಮೂಸ ಹಾಜಿ, ಇಬ್ರಾಹಿಂ ಬ್ರೈಟ್ ಮಾರ್ಬಲ್, ಅಯ್ಯೂಬ್ ಹಾಜಿ, ಆಸಿಫ್ ಸಕಲೇಶಪುರ, ರಹೀಂ ಕೋಡಿ, ಯಾಸೀನ್ ಶಿರೂರು, ಮೊಯಿದೀನ್ ಶಿವಮೊಗ್ಗ, ರಶೀದ್ ಕಜೆ, ಸುಹೈಲ್ ಶಿರೂರು, ಬಶೀರ್ ಕೈಕಂಬ ಇವರ ಉಪಸ್ಥಿತಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ಶೆರೀಫ್ ಮದನಿ ಕುಪ್ಪೆಟ್ಟಿ ಸ್ವಾಗತ ಕೋರಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶೆರೀಫ್ ಜೋಗಿಬೆಟ್ಟು ಧನ್ಯವಾದಗೈಯಲಿದ್ದಾರೆ.