janadhvani

Kannada Online News Paper

ಕೆಸಿಎಫ್ ಡಿಸೇನಿಯಮ್: ಎಸ್ಸೆಸ್ಸೆಫ್ ರಾಜ್ಯ ನಾಯಕರ ಡಿವಿಷನ್ ಸಂಚಲನ ಇಂದಿನಿಂದ

ಮಂಗಳೂರು: ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್ ಇದರ ದಶವಾರ್ಷಿಕ ಸಂಭ್ರಮದ ಪ್ರಯುಕ್ತ ಮೇ 19ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿರುವ ಡಿಸೇನಿಯಮ್ ಸಮ್ಮೇಳನದ ಪ್ರಚಾರ ಪ್ರಯುಕ್ತ ಎಸ್ಸೆಸ್ಸೆಫ್ ರಾಜ್ಯ ನಾಯಕರ ಡಿವಿಷನ್ ಸಂಚಲನ ಇಂದು ಬೆಳಿಗ್ಗೆ ಸುಳ್ಯದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಚಾಲನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಈಸ್ಟ್ ಹಾಗೂ ವೆಸ್ಟ್ ಜಿಲ್ಲೆಗಳ ಹನ್ನೆರಡು ಡಿವಿಷನ್‌ಗಳಿಗೆ ರಾಜ್ಯ ನಾಯಕರು ಭೇಟಿ ನೀಡಲಿದ್ದು ಕಾರ್ಯಕರ್ತರ ಜೊತೆ ಮುಲಾಖಾತ್, ಕೆಸಿಎಫ್ ಹಾದು ಬಂದ ಹಾದಿ, ಪೋಸ್ಟರ್ ಪ್ರದರ್ಶನ, ರಿಜಿಸ್ಟ್ರೇಷನ್ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು ಮೇ‌ 17ರಂದು ರಾತ್ರಿ ಸುರತ್ಕಲ್ ಡಿವಿಷನ್ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಸಮಾರೋಪ ಗೊಳ್ಳಲಿದೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು, ಫಿನಾನ್ಸ್ ಕಾರ್ಯದರ್ಶಿ ಮುಸ್ತಫಾ ನಈಮಿ ಹಾಗೂ ರಾಜ್ಯ ಕಾರ್ಯದರ್ಶಿಗಳು ಯಾತ್ರೆಗೆ‌ ನೇತೃತ್ವ ನೀಡಲಿದ್ದಾರೆ.