janadhvani

Kannada Online News Paper

ಈದುಲ್ ಅದ್’ಹಾ: ಈ ಬಾರಿ ಒಂಬತ್ತು ದಿನಗಳ ಸುದೀರ್ಘ ರಜಾದಿನಗಳ ಸಾಧ್ಯತೆ

ವಾರಾಂತ್ಯದ ವಿರಾಮದ ನಂತರ ಜೂನ್ 23 ರ ಭಾನುವಾರದಂದು ಕೆಲಸದ ದಿನವು ಪುನರಾರಂಭಗೊಳ್ಳುತ್ತದೆ.

ಕುವೈತ್ ಸಿಟಿ: ಬಕ್ರೀದ್ ಹಬ್ಬ ಪ್ರಯುಕ್ತ ಕುವೈತ್‌ನಲ್ಲಿ ಒಂಬತ್ತು ದಿನಗಳ ದೀರ್ಘ ರಜಾದಿನಗಳು ಲಭಿಸುವ ಸಾಧ್ಯತೆ. ಈ ವರ್ಷ ಜೂನ್ 16 ರ ಭಾನುವಾರದಂದು ಅರಫಾ ದಿನ ಆದಲ್ಲಿ, ಒಂಬತ್ತು ದಿನಗಳ ರಜೆಯಾಗಿರುತ್ತದೆ ಎಂದು ಅಲ್-ಅನ್ಬಾ ದಿನಪತ್ರಿಕೆ ವರದಿ ಮಾಡಿದೆ.

ಅರಫಾ ದಿನವು ಜೂನ್ 16 ರಂದು ಬಂದರೆ, ಜೂನ್ 17, 18 ಮತ್ತು 19 ರ ದಿನಗಳು. ಜೂನ್ 20ರ ಗುರುವಾರ ಎರಡು ರಜೆಗಳ ನಡುವೆ ಇರುವುದರಿಂದ ವಿಶ್ರಮ ರಜೆ ಘೋಷಿಸುವ ಸಾಧ್ಯತೆ ಇದೆ. ವಾರಾಂತ್ಯದ ವಿರಾಮದ ನಂತರ ಜೂನ್ 23 ರ ಭಾನುವಾರದಂದು ಕೆಲಸದ ದಿನವು ಪುನರಾರಂಭಗೊಳ್ಳುತ್ತದೆ.

ಆದರೆ ಜೂನ್ 15 ರ ಶನಿವಾರ ಅರಫಾ ದಿನ ಬಂದಲ್ಲಿ, ಈದ್ ರಜೆ ಜೂನ್ 16, 17 ಮತ್ತು 18 ರಂದು ಇರುತ್ತದೆ. ರಜೆಯ ನಂತರ, ಕೆಲಸದ ದಿನವು ಬುಧವಾರ, ಜೂನ್ 19 ರಂದು ಪುನರಾರಂಭವಾಗುತ್ತದೆ. ಹಾಗಿದ್ದರೆ ನಾಲ್ಕು ದಿನ ರಜೆ ಸಿಗಲಿದೆ.

ನಾಗರಿಕ ಸೇವಾ ಆಯೋಗವು (CSC) ಹಬ್ಬದ ರಜೆಯ ಸುತ್ತೋಲೆಯನ್ನು ಮುಂಚಿತವಾಗಿ ಹೊರಡಿಸುತ್ತದೆ. ರಜೆ ನಾಲ್ಕು ದಿನಗಳಾಗಿದ್ದರೆ, ಅದನ್ನು ವಿಸ್ತರಿಸಲು ಬಯಸುವ ನೌಕರರು ಜೂನ್ 19 ಮತ್ತು 20 ರಂದು ಆವರ್ತಕ ರಜೆಗಾಗಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಮೂಲಗಳನ್ನು ಉಲ್ಲೇಖಿಸಿ, ಈ ಎರಡು ದಿನಗಳಲ್ಲಿ ಮುಂಚಿತವಾಗಿ ರಜೆ ಅರ್ಜಿ ಸಲ್ಲಿಸದೆ ರಜೆ ತೆಗೆದುಕೊಳ್ಳುವುದನ್ನು ಸಂಪೂರ್ಣ ಅವಧಿಗೆ ಕೆಲಸಕ್ಕೆ ಗೈರುಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ವರದಿ ಹೇಳಿದೆ.

error: Content is protected !! Not allowed copy content from janadhvani.com