janadhvani

Kannada Online News Paper

KCF HVC ಸ್ವಯಂಸೇವಕರಿಂದ ಹಜ್ಜಾಜ್ ಗಳ ಸೇವೆ ಆರಂಭ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ HVC (Hajj Volunteer Core) ಇದರ ಸ್ವಯಂಸೇವಕರು ಈ ಸಲದ ಕರ್ನಾಟಕದ ಮೊದಲ ಹಜ್ಜಾಜ್ ಗಳ ತಂಡವು ಪವಿತ್ರ ಮದೀನಾ ಮುನವ್ವರಾ ತಲುಪಿದಾಗ ಅವರನ್ನು ಸ್ವಾಗತಿಸುವ ಮೂಲಕ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಇನ್ನು ಹಜ್ಜಾಜ್ ಗಳು ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಸೌದಿ ಅರೇಬಿಯಾದಿಂದ ಹಿಂತಿರುಗುವ ವರೆಗೆ KCF HVC-24 ಇದರ ಸ್ವಯಂಸೇವಕರು ಹಜ್ಜಾಜ್ ಗಳ ಸೇವೆಯಲ್ಲಿ ಸಕ್ರಿಯರಾಗಿರುತ್ತಾರೆ. ಹಜ್ಜ್ ಕರ್ಮದ ಪ್ರಮುಖ ದಿನಗಳಾದ ಅರಫಾ, ಮಿನಾ, ಮುಝ್ದಲಿಫಾ ಹಾಗೂ ಜಮ್ರತ್ ನಲ್ಲಿ ಪ್ರತ್ಯೇಕ ತಂಡ ಕಾರ್ಯಾಚರಣೆಯನ್ನು ಮಾಡಲಿದ್ದಾರೆ. ಪ್ರತಿ ವರ್ಷ ಇವರ ಸೇವೆಯನ್ನು ಮೆಚ್ಚಿ ಸೌದಿ ಅರೇಬಿಯಾದ ಆರೋಗ್ಯ ಮಂತ್ರಾಲಯವು ಅಭಿನಂದನಾ ಪತ್ರವನ್ನು ನೀಡುತ್ತಿದ್ದಾರೆ.

ಈ ಸಲದ ಸ್ವಯಂಸೇವಕರ ತಂಡದ ಚೇರ್ಮಾನ್ ಆಗಿ ಮುಹಮ್ಮದ್ ಮಲಬೆಟ್ಟು, ಕನ್ವೀನರ್ ಇಬ್ರಾಹಿಮ್ ಕಿನ್ಯಾ ಕೋಶಾಧಿಕಾರಿಯಾಗಿ ಉಮರ್ ಅಳಕೆಮಜಲು, ಮದೀನಾ ಕ್ಯಾಪ್ಟನ್ ರಝ್ಝಾಕ್ ಉಳ್ಳಾಲ, ತಾಜುದ್ದೀನ್ ಸುಳ್ಯ ಹಾಗೂ ಮಕ್ಕತುಲ್ ಮುಕರ್ರಮ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ ರವರು ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com