janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ದಶವರ್ಷ ದಾಟುತ್ತಿರುವಾಗ…..

ಸುನ್ನಿಯಾಗಿ ವಿದೇಶಕ್ಕೆ ಹೋದವನು ಬಿದ್‌ಅತ್ ಸೋಂಕು ತಗುಲಿ ಊರಿಗೆ ಮರಳುತಿದ್ದ ಕಾಲವೊಂದಿತ್ತು. ಈಗ ಅದು ಬದಲಾಗಿದೆ. ಇಂದು ವಿದೇಶಕ್ಕೋಗಿ ಬಂದವನು ನಾನು KCF ನ ಕಾರ್ಯಕರ್ತ ಎಂದು ಅಭಿಮಾನ ದಿಂದ ಹೇಳುತ್ತಿದ್ದಾನೆ.

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ವರ್ಷಗಳ ಹಿಂದಿನ ಕಥೆ ಇದು. ಆತ ಬಿದ್‌ಅತ್ ನಂಟಿರುವ ಸಂಘಟನೆಯ ಕಾರ್ಯಕರ್ತ. ಒಮ್ಮೆ ನಮ್ಮೂರಿಗೆ ಬಂದಾಗ ಆತ ಆತನ ಸಂಘಟನೆ ಬಗ್ಗೆ ಚರ್ಚೆಗಿಳಿದ. ಅಂದು ನಾನು ಮುತ‌ಅಲ್ಲಿಮ್ ಆಗಿದ್ದ ಕಾರಣ ಆತನೊಂದಿಗೆ ಬಿದ್‌ಅತ್ ಬಗ್ಗೆ ಚರ್ಚಿಸಲು ಸುನ್ನೀವಾಣಿ ಪತ್ರಿಕೆಯನ್ನು ಬಳಸಿ ಕೊಂಡಿದ್ದೆ. ಸುನ್ನತ್ ಜಮಾಅತ್‌ನ ಧ್ವನಿ ಯಾಗಿ ಮೂಡಿ ಬರುತ್ತಿದ್ದ ಸುನ್ನೀವಾಣಿ ಪ್ರತೀ ತಿಂಗಳು ತಪ್ಪದೆ ಪಡೆಯುತ್ತಿದ್ದ ನಾನು ಅದನ್ನು ಸಂಗ್ರಹಿಸಿಟ್ಟಿದ್ದೆನು. ಆತ “ನನಗೂ ಕೂಡ ಸುನ್ನತ್ ಜಮಾಅತ್ ಕಲಿಯಬೇಕು”, ಸುನ್ನೀವಾಣಿ ಪತ್ರಿಕೆಯ ಎಲ್ಲಾ ಸಂಚಿಕೆ ನೀಡಲು ಕೋರಿಕೊಂಡಿದ್ದ. ನಾನು ಒಪ್ಪಲಿಲ್ಲ. ಆತ ಅದನ್ನು ನಾಶ ಪಡಿಸಬಹುದೆಂಬ ಭಯ ಕೂಡ ನನ್ನಲ್ಲಿತ್ತು. ಮಿತ್ರನ ಶಿಫಾರಸ್ಸು ಮೇರೆಗೆ ಸುನ್ನೀವಾಣಿ ಆತನಿಗೆ ನೀಡಿದ್ದೆನು.‌ ನನ್ನ ಊಹೆಯಂತೆ ಆತ ಎಲ್ಲಾ ಸುನ್ನೀವಾಣಿಯನ್ನೂ ನಾಶ ಪಡಿಸಿದ್ದ. ವಿಷಯ ತಿಳಿದ ನನಗೆ ಆಕ್ರೋಶ, ದು:ಖ ಉಂಟಾಗಿತ್ತು. ವರ್ಷ ಕಳೆದ ಬಳಿಕ ಉದ್ಯೋಗ ನಿಮಿತ್ತ ಆತ ವಿದೇಶ ಯಾತ್ರೆ ಕೈ ಗೊಂಡ. ಅಲ್ಲಿ KCF ಆತನನ್ನು ಅಪ್ಪಿಕೊಂಡಿತು. ಆತ KCF ಒಳ ಹೊಕ್ಕ. ಇಂದು ಆತ KCF ನ ಕಾರ್ಯಕರ್ತ.ಕಟ್ಟರ್ ಸುನ್ನಿ ಕೂಡ.

ಇದು ಆತನೊಬ್ಬನ ಕಥೆಯಲ್ಲ. ಇಂತಹ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಹಿಂದೆ ವಿದೇಶಕ್ಕೆ ಹೋಗಿ ಬಂದರೆ ಅಲ್ಲಿ ಮೌಲಿದ್,ಉರೂಸ್ ಇಲ್ಲ ಎನ್ನುತ್ತಿದ್ದ ಸಮಯವಿತ್ತು. ಸುನ್ನಿಯಾಗಿ ವಿದೇಶಕ್ಕೆ ಹೋದವನು ಬಿದ್‌ಅತ್ ಸೋಂಕು ತಗುಲಿ ಊರಿಗೆ ಮರಳುತಿದ್ದ ಕಾಲವೊಂದಿತ್ತು. ಈಗ ಅದು ಬದಲಾಗಿದೆ. ಇಂದು ವಿದೇಶಕ್ಕೋಗಿ ಬಂದವನು ನಾನು KCF ನ ಕಾರ್ಯಕರ್ತ ಎಂದು ಅಭಿಮಾನ ದಿಂದ ಹೇಳುತ್ತಿದ್ದಾನೆ. ಊರಲ್ಲಿ “ಅಲವಲಾದಿ” ಯಾಗಿ ತಿರುಗಾಡಿದವನು ವಿದೇಶಕ್ಕೋದ ಮೇಲೆ KCF ಸೇರಿ ಕಟ್ಟರ್ ಸುನ್ನಿಯಾಗಿ ಬದಲಾದ ಚರಿತ್ರೆ ಗಳು ನಮ್ಮೊಂದಿಗಿದೆ. ಸುನ್ನತ್ ಜಮಾಅತ್ ರಂಗದಲ್ಲಿ KCF ನಡೆಸಿದ ಕ್ರಾಂತಿ ಸಣ್ಣದೇನಲ್ಲ. ಆಧ್ಯಾತ್ಮಿಕ ಮಜ್ಲಿಸ್, ಧಾರ್ಮಿಕ ತರಗತಿಯ ಮೂಲಕ KCF ಅನಿವಾಸಿ ಭಾರತೀಯರ ಮನದಾಳದಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿದೆ.

ಊರಲ್ಲಿ ಮಸೀದಿಯ ಮೆಟ್ಟಿಲು ಹತ್ತದವನು, ಸ್ವಲಾತ್ ಮಜ್ಲಿಸ್‌ನ ವಾಸನೆಯನ್ನೂ ಆಸ್ವಾದಿಸದವನು ವಿದೇಶಕ್ಕೋಗಿ ಬಂದ ಬಳಿಕ ಬದಲಾಗಿದ್ದಾನೆ. ಜಮಾಅತ್ ನಮಾಝ್,ಸ್ವಲಾತ್ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಆತನ ಸಾನಿಧ್ಯವಿದೆ.ಆತನಲ್ಲಿ ಈ ಬದಲಾವಣೆಗೆ ಕಾರಣ‌ KCF. ಬಿದ್‌ಅತ್‌ನ ಸೋಂಕು ತಗುಲಿದ್ದ, ಧಾರ್ಮಿಕತೆಯಿಂದ ದೂರ ಸರಿದು ಹೋಗಿದ್ದ ಹಲವಾರು ಯುವಕರಿಗೆ ಹಿದಾಯತ್‌ನ ಬೆಳಕು ನೀಡಲು KCF ಗೆ ಸಾಧ್ಯವಾಗಿದೆ ಎಂದರೆ ಅದು ಸಣ್ಣ ಸಾಧನೆ ಏನಲ್ಲ.

ಆಧ್ಯಾತ್ಮಿಕ ರಂಗದಂತೆ ಶೈಕ್ಷಣಿಕ ರಂಗದಲ್ಲಿಯೂ KCF ನಡೆಸಿದ ಆಂದೋಲನ ಆಶ್ಚರ್ಯ ಪಡುವಂತದ್ದು. ಉತ್ತರ ಕರ್ನಾಟಕದ ವಿವಿಧ ಹಳ್ಳಿಗಳಲ್ಲಿ ಮುಸ್ಲಿಂ ಸಮುದಾಯದ ಶೈಕ್ಷಣಿಕತೆ ಅತ್ಯಂತ ದಯನೀಯವಾಗಿತ್ತು. ಶೈಕ್ಷಣಿಕ ವಾಗಿ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಇಹ್ಸಾನ್ ಎಂಬ ತಂಡ ಕಟ್ಟಿ ಶಿಕ್ಷಣ ಸಮುಚ್ಚಯಕ್ಕೆ ಅಡಿಪಾಯ ಹಾಕಿದ ಕೀರ್ತಿ KCF ಗೆ ಸಲ್ಲಬೇಕು. ಮಸೀದಿ,ಮದ್ರಸ,ಶಿಕ್ಷಣ ಕೇಂದ್ರಗಳು ತಲೆಯೆತ್ತಿ ನಿಂತ ಪರಿಣಾಮ ಹಲವಾರು ಹಳ್ಳಿಗಳು ಧಾರ್ಮಿಕತೆಯ ಸೊಬಗನ್ನು ಅನುಭವಿಸಿತು. ಮುಂದೊಂದು ದಿನ ಉತ್ತರ ಕರ್ನಾಟಕವು ದಕ್ಷಿಣ ಕನ್ನಡ ಜಿಲ್ಲೆಯಂತೆ ಶೈಕ್ಷಣಿಕ ವಾಗಿ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ರೀತಿಯಲ್ಲಿ SSF ನ ತಂಡ KCF ನೆರವಿನಿಂದ ಕಾರ್ಯಾಚರಿಸುತ್ತಿದೆ.

ಹಗಲಿರುಳು ಕಷ್ಟಪಟ್ಟು ದುಡಿದು ಅದರ ಒಂದಂಶ ಹಿಂದುಳಿದ ಮುಸ್ಲಿಮರ ಶಿಕ್ಷಣಕ್ಕಾಗಿ ಮೀಸಲಿಟ್ಟು ಮುಸ್ಲಿಂ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು KCF ನಡೆಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಊರಿನ ಸಂಘಸಂಸ್ಥೆಗಳಿಗೂ, ಧಾರ್ಮಿಕ ಚಳುವಳಿಗಳಿಗೂ KCF ನ ನೆರಳಿದೆ. ಅದರ ಜೊತೆ ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದವರಿಗೆ KCF ಆಸರೆಯಾಗಿದೆ.ಯಾರಾದರೂ ಮೃತರಾದರೆ ಅವರ ದಫನ ಕಾರ್ಯಗಳ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಹಜ್ ಸಮಯದಲ್ಲಿ ಸ್ವಯಂ ಸೇವಕರಾಗಿ ದುಡಿದು ಸೌದಿ ಸರ್ಕಾರದಿಂದ ಪ್ರಶಂಸೆಯನ್ನು ಪಡೆದು ಕೊಂಡಿದೆ.

ಹೊಟ್ಟೆ ಪಾಡಿಗಾಗಿ ವಿದೇಶಕ್ಕೆ ದುಡಿಯಲು ಹೋದ ಯುವಕರು ಕಟ್ಟಿ ಬೆಳೆಸಿದ KCF ಇಂದು ಹತ್ತರ ಸಂಭ್ರಮದಲ್ಲಿದೆ.
ಅನಿವಾಸಿ ಭಾರತೀಯರ ಹೆಮ್ಮೆಯ ಸಂಘಟನೆ KCF ದಶಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದೆ. ಇದೇ ಬರುವ ಮೇ 19 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ KCFನ ಐತಿಹಾಸಿಕ ವಾದ ಸಮಾವೇಶ ನಡೆಯಲಿದೆ. ಹತ್ತು ವರ್ಷಗಳು ದಾಟಿ KCF ಮುನ್ನಡೆಯುವಾಗ ಅದು ಇಲ್ಲಿ ನಡೆಸಿದ ಆಂದೋಲನ ಅದ್ಭುತ ವಾದದ್ದು. ಅತೀ ಕಡಿಮೆ ಅವಧಿಯಲ್ಲಿ ಬೃಹತ್ ಶಕ್ತಿಯಾಗಿ KCF ಬೆಳೆದು ನಿಂತಿದ್ದರೆ ಅದರ ಹಿಂದೆ ಸಾವಿರಾರು ಕಾರ್ಯಕರ್ತರ ಬೆವರಿನ ಹನಿಗಳಿವೆ.

ದುಡಿಮೆಯ ಒತ್ತಡದ ನಡುವೆ ಬಿಡುವು ಸಿಕ್ಕಾಗ KCF ಅನ್ನು ಸಂಘಟಿಸಲು ಓಡಾಡಿದ ನಾಯಕರು, ಹಗಲಿರುಳು ಎನ್ನದೆ ಸೇವೆ ಗೈದ ಕಾರ್ಯಕರ್ತರು KCF ಬೆಳವಣಿಗೆಯ ಶಕ್ತಿಗಳು. ಅವರ ಅವಿಶ್ರಾಂತ ಪರಿಶ್ರಮದಿಂದ KCF ಮುಸ್ಲಿಂ ಸಮಾಜಕ್ಕೆ ಬೆಳಕಾಗಿ ಬೆಳೆದು ನಿಂತಿದೆ. ನಮ್ಮೂರಿನ ಧಾರ್ಮಿಕ, ಲೌಕಿಕ ಮುನ್ನಡೆಯಲ್ಲಿ ಹೆಗಲು ಕೊಟ್ಟು ತ್ಯಾಗ ಸಹಿಸಿದ KCF ನಾಯಕರು ಅಡ್ಯಾರ್ ಗಾರ್ಡ್‌ನ್‌ಗೆ ನಮ್ಮನ್ನು ಕರೆಯುತ್ತಿದ್ದಾರೆ. ಶೈಖುನಾ ಸುಲ್ತಾನುಲ್ ಉಲಮಾ, ಸಯ್ಯಿದ್ ಖಲೀಲ್ ತಂಙಳ್, ಪೆರೋಡ್ ಉಸ್ತಾದರ ಸಹಿತ ಅತಿರಥ ಮಹಾರಥರು ಭಾಗವಹಿಸುವ ಸಮ್ಮೇಳನ ಮೇ 19 ರಂದು ನಡೆಯುವಾಗ ಅದರಲ್ಲಿ ಭಾಗವಹಿಸಿ KCF ನಾಯಕರ ಮನ ತಣಿಸೋಣ.

error: Content is protected !! Not allowed copy content from janadhvani.com