janadhvani

Kannada Online News Paper

ಸಮುದ್ರದಾಚೆ ನಮ್ಮವರು ಮಾಡಿದ ಸೇವೆ ತಿಳಿಸಲು ನಿಮ್ಮೂರಿಗೆ ಹೊರಟಿದ್ದೇವೆ!

✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ (ರಾಜ್ಯಾಧ್ಯಕ್ಷರು: ಎಸ್ಸೆಸ್ಸೆಫ್ ಕರ್ನಾಟಕ)

ಹೆಸರು ಬೇರೆ ಬೇರೆ ಆಗಿರಬಹುದು ಆದರೆ ಎಲ್ಲವೂ ಒಂದೇ. ಅವರು ಸಮುದ್ರದಾಚೆ ಖಿದ್‌ಮತ್ ಮಾಡುವ ಕಾರಣ ಕೆಸಿಎಫ್ ಎಂದು ಹೆಸರು ಹಾಕಿದರು ಅಷ್ಟೇ.
ಅಂದು ಕರ್ನಾಟಕ ಉಲಮಾ ಒಕ್ಕೂಟದ ಆದರಣೀಯ ಅಧ್ಯಕ್ಷರಾಗಿದ್ದ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಕೆಸಿಎಫ್ ಸಂಘಟನೆಗೆ ಚಾಲನೆ ನೀಡಿ ಇಂದಿಗೆ ಹತ್ತು ಸಂವತ್ಸರಗಳು ಕಳೆದಿವೆ. ಗಲ್ಫ್ ರಾಷ್ಟ್ರಗಳ ಕಟ್ಟುನಿಟ್ಟಿನ ಕಾನೂನು, ಮುಂಜಾನೆಯಿಂದ ಮುಸ್ಸಂಜೆ ತನಕ ಇರುವ ಕೆಲಸದ ಒತ್ತಡ, ಯಾವುದೋ ಊರಿನಿಂದ ಬಂದು ಎಲ್ಲೆಲ್ಲೋ ದುಡಿಯುವ ಅನಿವಾಸಿಗಳ ಮಧ್ಯೆ ನಮ್ಮವರನ್ನು ಹುಡುಕಿ ಸಂಘಟನೆಗೆ ಸೆಳೆಯುವ ಚಾಲೆಂಜು! ಈ ರೀತಿಯ ಪ್ರತಿಕೂಲ ವಾತಾವರಣಗಳ ಮಧ್ಯೆಯೂ ನಮ್ಮ ಕೆಸಿಎಫ್ ನಾಯಕರ ಇಚ್ಛಾಶಕ್ತಿಯ ಫಲವಾಗಿ ಹತ್ತು ವರ್ಷಗಳಲ್ಲಿ ನೂರು ವರ್ಷಗಳ ಸಾಧನೆ ಮಾಡಿ ಮುಗಿಸಿದೆ.

ಉತ್ತರ ಕರ್ನಾಟಕದಲ್ಲಿ ನಡೆಸಿದ ಶೈಕ್ಷಣಿಕ ಚಳವಳಿ, ಸಾಂತ್ವನ ಸೇವೆಗಳ ಸಿಹಿ ಸ್ಪರ್ಷ, ಅನಿವಾಸಿ ಮಿತ್ರರಲ್ಲಿ ಮೂಡಿಸಿದ ಧಾರ್ಮಿಕ ಜಾಗೃತಿ, ಕೊರೋನ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಕೆಸಿಎಫ್ ಸ್ವಯಂ ಸೇವಕ ತಂಡ ನಡೆಸಿದ ಮಿಂಚಿನ ಸಂಚಲನ. ಹೀಗೆ ನೂರಾರು ಕಥೆ ಹೇಳಲಿಕ್ಕಿದೆ ಈ ಹತ್ತು ವರ್ಷಗಳಿಗೆ.
ಕೆಸಿಎಫ್ ಕಡಲಾಚೆ ಬಹಳಷ್ಟು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿದೆ. ಆದರೆ ಹತ್ತರ ಸಂಭ್ರಮವನ್ನು ತಾಯ್ನಾಡಿನ ಸುನ್ನೀ ಸಂಘ ಕುಟುಂಬದ ಜೊತೆ ಸೇರಿ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಜಾಗತಿಕ ಸುನ್ನೀ ಶಕ್ತಿಯ ಸುಲ್ತಾನ್ ಸಮಾರಂಭದ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ಸಮ್ಮೇಳನ ಐತಿಹಾಸಿಕ ಗೊಳಿಸಲೇ ಬೇಕಿದೆ.

ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಇಂದಿನಿಂದ ಡಿವಿಷನ್ ಸಂಚಲನ ಹಮ್ಮಿಕೊಂಡಿದೆ. ಇಂದು ಬೆಳಿಗ್ಗೆ 7ಗಂಟೆಗೆ ಸುಳ್ಯದಿಂದ ಆರಂಭವಾಗಲಿರುವ ಡಿವಿಷನ್ ಸಂಚಲನದ ಧ್ವಜ ಹಸ್ತಾಂತರ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ನಡೆಸಿಕೊಡಲಿದ್ದಾರೆ. ನಿಮ್ಮ ಡಿವಿಷನ್‌ಗೆ ನಾವು ಬರುವಾಗ ನಮ್ಮೆಲ್ಲಾ ಕಾರ್ಯಕರ್ತರು ಒಟ್ಟು ಸೇರಿ ಸಹಕರಿಸುವಿರಿ ಎಂಬ ನಿರೀಕ್ಷೆ ಇದೆ. ಮೇ ಹತ್ತೊಂಬತ್ತರ ಹಬ್ಬಕ್ಕೆ ಮೂರು ದಿನ ಮಾತ್ರ ಬಾಕಿ ಇರುವಾಗ ಹಬ್ಬದ ಸಂಭ್ರಮ ಇಂದಿನಿಂದಲೇ ಭರ್ಜರಿಯಾಗಿ ನಡೆಸೋಣ. ನಾವು ಹೊರಟಿದ್ದೇವೆ, ಇನ್ನು ನಿಮ್ಮ ಊರಲ್ಲಿ ಒಟ್ಟು ಸೇರೋಣ.

error: Content is protected !! Not allowed copy content from janadhvani.com