janadhvani

Kannada Online News Paper

ಜು.27ಕ್ಕೆ ಎಜು ಪಾರ್ಕ್ ಮಸ್ಜಿದ್’ನಲ್ಲಿ ಜುಮ್ಮಾ ಆರಂಭ- ಎ.ಪಿ. ಉಸ್ತಾದ್ ನೇತೃತ್ವ

ಆದೂರು:ಸೈಯ್ಯದ್ ಅಶ್ರಫ್ ತಂಙಳ್ ಮದನಿ,ಅಸ್ಸಖಾಫ್ ಆದೂರು ಅವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಮಜ್ಲಿಸ್ ಎಜು ಪಾರ್ಕ್’ ನಲ್ಲಿ ಹೊಸದಾಗಿ ಇತ್ತೀಚೆಗೆ ನಿರ್ಮಿಸಲ್ಪಟ್ಟ ವಿಶಾಲವಾದ ಮಸ್ಜಿದ್ನಲ್ಲಿ ‘ಜುಮ್ಮಾ ಆರಂಭ’ ದಿನಾಂಕ-27/7/2018 ಶುಕ್ರವಾರ ಜಾಗತಿಕ ಮುಸ್ಲಿಮರ ಅನಿಷೇಧ್ಯ ನಾಯಕ ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯಲಿಕ್ಕಿದೆ.ಪ್ರಸ್ತುತ ಕಾರ್ಯಕ್ರಮದಲ್ಲಿ ಕರ್ನಾಟಕ ಘನ ಸರಕಾರದ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಲ್ಲದೇ ಹಲವು ಸಾದಾತುಗಳು, ಉಲಮಾ,ಉಮರಾ ನಾಯಕರು ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸುನ್ನೀ ಮುಸ್ಲಿಮರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಎಜು ಪಾರ್ಕ್ ಕಛೇರಿ ವಿಭಾಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com