janadhvani

Kannada Online News Paper

ಕಣ್ಣೂರು ವಿಮಾನ ನಿಲ್ದಾಣದಿಂದ ಅಬುಧಾಬಿ, ದಮ್ಮಾಮ್ ಗೆ‌ ವಿಮಾನ ಹಾರಾಟ

ಈ ವರದಿಯ ಧ್ವನಿಯನ್ನು ಆಲಿಸಿ


ಹೊಸದಿಲ್ಲಿ: ಕಣ್ಣೂರು ವಿಮಾನನಿಲ್ದಾಣದಿಂದ ಅಬುಧಾಬಿ ಮತ್ತು ದಮ್ಮಾಮ್‌ಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಜೆಟ್ ಏರ್ವೇಸ್, ಗೋ ಏರ್ ಗೆ ವಿಮಾನ ಸೇವೆಗಳಿಗಾಗಿ ಅನುಮತಿ ನೀಡಲಾಗಿದೆ.
ಸಿವಿಲ್ ಏವಿಯೇಷನ್ ಸಚಿವ ಸುರೇಶ್ ಪ್ರಭು, ಸಚಿವ ಆಲ್ಫೊನ್ಸ್ ಕಣ್ಣಂತಾನಂಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕಣ್ಣೂರು- ದೋಹಾ ಮಾರ್ಗದಲ್ಲಿ ಇಂಡಿಗೋ ಮತ್ತು ಕಣ್ಣೂರು- ಅಬುಧಾಬಿ, ಕಣ್ಣೂರು- ಮಸ್ಕತ್, ಕಣ್ಣೂರು- ರಿಯಾದ್ ಮಾರ್ಗದಲ್ಲಿ ಏರ್ ಇಂಡಿಯಾ ಹಾರಾಟಕ್ಕೆ ಅನುಮತಿ ಕೋರಿದ್ದು, ಈ ಹಾರಾಟಗಳಿಗೆ ಅನುಮತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳಿಂದ ಹಾರಾಟ ನಡೆಸಲು ವಿದೇಶಿ ವಿಮಾನಗಳಿಗೆ ನೀತಿಯ ಆಧಾರದಲ್ಲಿ ಅನುಮತಿ ನೀಡಲಾಗುತ್ತದೆ.
ಎಂ.ಪಿ.ವಿ.ಮುರಳೀಧರನ್ ಅವರೊಂದಿಗೆ ಮಂಗಳವಾರ ಕಣ್ಣಂತಾನಂ, ಸುರೇಶ್ ಪ್ರಭು ಅವರನ್ನು ಭೇಟಿಯಾಗಿದ್ದರು.

error: Content is protected !! Not allowed copy content from janadhvani.com