janadhvani

Kannada Online News Paper

ಆದೂರು: ಗ್ರಾಂಡ್ ಮಸ್ಜಿದ್ ನಲ್ಲಿ ಜುಮುಅಃ ಆರಂಭ

ಆದೂರು: ಸಯ್ಯಿದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಆದೂರು ಇವರ ಸಾರಥ್ಯದಲ್ಲಿ ಆದೂರು ಮಜ್ಲಿಸ್ ಎಜು ಪಾರ್ಕ್ ಕ್ಯಾಂಪಸ್‍ನಲ್ಲಿ ನಿರ್ಮಿಸಲ್ಪಟ್ಟ ಮಜ್ಲಿಸ್ ಗ್ರಾಂಡ್ ಮಸೀದಿಯಲ್ಲಿ ಜುಮಾ ಆರಂಭಿಸಲಾಯ್ತು. ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ನೀಡಿದರು.

ನಂತರ ಮಾತನಾಡಿದ ಉಸ್ತಾದರು ಮರ್ಕಝು ಸ್ಸಖಾಫತಿಸ್ಸುನ್ನಿಯ್ಯ ಸಂಸ್ಥೆಯು ಉತ್ತರ ಪದೇಶದ ವಿವಿಧ ಕಡೆಗಳಲ್ಲಿ 500 ಮಸೀದಿಯನ್ನು ನಿರ್ಮಿಸಿದೆ ಮತ್ತು ಕರ್ನಾಟಕದಲ್ಲಿ ಸುಮಾರು 60ಮಸೀದಿ ನಿರ್ಮಿಸಿಕೊಟ್ಟಿದೆ. ಮರ್ಕಝ್ ಅಧೀನ ಸಂಸ್ಥೆಯಾದ ಆರ್‍ಸಿಎಫ್‍ಐ ವತಿಯಿಂದ ಮಜ್ಲಿಸ್ ಗ್ರಾಂಡ್ ಮಸೀದಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಭಾಗವಹಿಸಿ ಮಾತನಾಡಿ ನಾನು ಉಲಮಾಗಳ ಮಾರ್ಗದರ್ಶನದಲ್ಲಿ ರಾಜಕೀಯದಲ್ಲಿ ಯಶಸ್ವಿಯಾಗಿದ್ದೇನೆ ಎಂದರು.ಸೈಯ್ಯದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಆದೂರು ಕಾರ್ಯಕ್ರಮದ ನೇತೃತ್ವ ವಹಿಸಿದರು.

ಇಬ್ರಾಹೀಂ ಪೂಕುಂಞ ತಂಙಳ್ ಕಲ್ಲಕಟ್ಟ, ಪಂಜಿಕಲ್ ತಂಙಳ್, ಸೈಯ್ಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕನ್ನಾವಂ, ಸೈಯ್ಯದ್ ಆಟ್ಟಕೋಯ ತಂಙಳ್ ಆದೂರು, ಸೈಯ್ಯದ್ ಎ.ಪಿ.ಎಸ್ ತಂಙಳ್ ಆದೂರು, ಸೈಯ್ಯದ್ ಮುಹಮ್ಮದ್ ಸಖಾಫ್ ತಂಙಳ್ ಮನ್ನಪಾರೆ, ಸೈಯ್ಯದ್ ಹಸನ್ ಅಬ್ದುಲ್ಲಾ ಇಂಬಿಚ್ಚಿಕೋಯ ತಂಙಳ್, ಸೈಯ್ಯದ್ ಖಾಸಿಂ ತಂಙಳ್ ಸಾಲೆತ್ತೂರು, ಎಸ್ ವೈಎಸ್ ಮುಖಂಡ ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಯೂಸುಫ್ ಸಖಾಫಿ ಆದೂರು, ಮುಹಮ್ಮದ್ ಮದನಿ ರೆಂಜಾ, ರಫೀಕ್ ಸಅದಿ ಆದೂರು, ಹನೀಫ್ ಸಅದಿ, ಜಲಾಲುದ್ದೀನ್ ಅಲ್-ಜಮಲುಲೈಲಿ ತಂಙಳ್ ಮಲ್ಲಪುರಂ, ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಉಪಸ್ಥಿತರಿದರು.

error: Content is protected !! Not allowed copy content from janadhvani.com