janadhvani

Kannada Online News Paper

ಪ್ರತೀಕಾರದ ಸಮರ್ಥನೆಗೆ ಧರ್ಮದ ದುರ್ವ್ಯಾಖ್ಯಾನ ಖಂಡನೀಯ- ಎಸ್ ವೈ ಎಸ್

ಶತ್ರುವಿನೊಂದಿಗೂ ಕರುಣೆ ತೋರಿ ಉದಾತ್ತ ಮಾದರಿಯನ್ನು ಮುಂದಿಟ್ಟ ಪ್ರವಾದಿ ಮುಹಮ್ಮದ್ (ಸ) ರವರ ನಡೆ-ನುಡಿಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಬದಲು
ತಮ್ಮ ಸಿದ್ಧಾಂತಗಳಿಗೆ ಧಾರ್ಮಿಕ ಲೇಪನ ಹಚ್ಚಿ ಸಮರ್ಥಿಸುವುದಕ್ಕಾಗಿ ಅವುಗಳನ್ನು ದುರ್ವ್ಯಾಖ್ಯಾನಗೊಳಿಸುವ ಪ್ರವೃತ್ತಿ ಖಂಡನೀಯ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ತಮ್ಮ ವಿರುದ್ಧ ಖಡ್ಗವೆತ್ತಿದ್ದ ಶತ್ರುವೊಬ್ಬನು ನಿರಾಯುಧನಾದಾಗ
ಅವನ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ಪ್ರವಾದಿಗಳಿಗಿತ್ತು. ಆದರೆ ಅವರು ಅವನನ್ನು ಕ್ಷಮಿಸಿ ಕಳುಹಿಸಿಕೊಟ್ಟರು.

ಪ್ರವಾದಿಯವರ ಉದಾತ್ತ ಜೀವನ ಸಂದೇಶಕ್ಕೆ ಮಾದರಿಯಾದ ಈ ಘಟನೆಯನ್ನು ವಿಕಲವಾಗಿ ವ್ಯಾಖ್ಯಾನಿಸಿ ಪ್ರವಾದಿಗಳು ಪ್ರತೀಕಾರ ತೀರಿಸುವಂತೆ ಪಿ ಎಫ್ ಐ ಸಂಘಟನೆಯು ಕೇರಳದಲ್ಲಿ ನಡೆಸಿದ ಸಮ್ಮೇಳನ ಒಂದರಲ್ಲಿ ಭಾಷಣ ಮಾಡಲಾಗಿದೆ. ಇದು ಸ್ಪಷ್ಟವಾದ ಪ್ರವಾದಿ ನಿಂದನೆಯಾಗಿದ್ದು, ಇಸ್ಲಾಮಿನ ಬಗ್ಗೆ
ಕೋಮುವಾದ, ಭಯೋತ್ಪಾದನೆಗಳನ್ನು ಆರೋಪಿಸುತ್ತಿರುವ ಸಂಘಪರಿವಾರಕ್ಕೆ ಅವರ ವಾದಗಳನ್ನು ಮತ್ತಷ್ಟು ಹರಡಲು
ಇಂತಹ ಹೇಳಿಕೆಗಳು
ಸರಕಾಗುತ್ತಿದೆ.

ಇದು ಅಕ್ಷಮ್ಯವಾಗಿದ್ದು, ಇಂತಹ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಸಮಾಜವು ಜಾಗೃತವಾಗಿರಬೇಕು ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಎಂ ಕಾಮಿಲ್ ಸಖಾಫಿ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com