janadhvani

Kannada Online News Paper

ಉಮ್ರಾ ಬುಕಿಂಗ್ ಸಮಸ್ಯೆ: ಇಅ್ತಮರ್ನಾ ಮೊಬೈಲ್ ಆ್ಯಪ್ ಅಪ್ಡೇಟ್ ಮಾಡುವಂತೆ ಸೂಚನೆ

ಪ್ರವಾಸಿ ವೀಸಾದಲ್ಲಿ ಇತರ ಗಲ್ಫ್ ದೇಶಗಳಿಂದ ಬರುವ ವಲಸಿಗರು ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ಉಮ್ರಾ ಪರವಾನಗಿಯನ್ನು ಪಡೆಯಬಹುದು

ರಿಯಾದ್: ಉಮ್ರಾ ಅನುಮತಿಗೆ ಮುಂಗಡ ಬುಕಿಂಗ್‌ಗಾಗಿ ಮೊಬೈಲ್ ಅಪ್ಲಿಕೇಶನ್ ‘ಇಅ್ತಮಾರ್ನಾ’ ಅನ್ನು ಪ್ರವೇಶಿಸಲು ಸಾಧ್ಯವಾಗದವರು ಇತ್ತೀಚಿನ ಆವೃತ್ತಿಗೆ ನವೀಕರಿಸಿರುವುದನ್ನು(Update) ಖಚಿತಪಡಿಸಿಕೊಳ್ಳಬೇಕು ಎಂದು ಹಜ್ ಉಮ್ರಾ ಸಚಿವಾಲಯ(Ministry of Hajj and Umrah) ಹೇಳಿದೆ.

ಕೆಲವು ಬಳಕೆದಾರರಿಗೆ “Eatmarna” ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂಬ ಸಮಸ್ಯೆಗೆ ಪರಿಹಾರವಾಗಿ ಹಜ್ ಮತ್ತು ಉಮ್ರಾ ಸಚಿವಾಲಯವು ಇದನ್ನು ಸ್ಪಷ್ಟಪಡಿಸಿದೆ. Eatmarna ದ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಅಥವಾ ಪ್ರಸ್ತುತ ಅಪ್ಲಿಕೇಶನ್ ಅನ್ನು ಅಳಿಸಲು (Uninstall) ಮತ್ತು ಅದನ್ನು ಮರು-ಡೌನ್‌ಲೋಡ್ ಮಾಡಲು ಸಚಿವಾಲಯವು ಗ್ರಾಹಕರನ್ನು ಕೇಳಿದೆ.

ಸಮಸ್ಯೆ ಮತ್ತೆ ಮುಂದುವರಿದರೆ, ಗ್ರಾಹಕರು ತಮ್ಮ ವೈಯಕ್ತಿಕ ವಿವರಗಳನ್ನು ಸಚಿವಾಲಯದ ಖಾತೆಗೆ ಪ್ರತ್ಯೇಕ ಸಂದೇಶಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಕಳುಹಿಸಬಹುದು ಎಂದು ಸಚಿವಾಲಯ ಸೂಚಿಸಿದೆ.

ಪ್ರವಾಸಿ (Tourist) ವೀಸಾದಲ್ಲಿ ಇತರ ಗಲ್ಫ್ ದೇಶಗಳಿಂದ ಬರುವ ವಲಸಿಗರು ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ಉಮ್ರಾ ಪರವಾನಗಿಯನ್ನು ಪಡೆಯಬಹುದು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಈ ಹಿಂದೆ ಘೋಷಿಸಿತ್ತು. ಇಅ್ತಮರ್ನಾ(Eatmarna) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಉಮ್ರಾ ಪರವಾನಗಿಯನ್ನು ಪಡೆಯಬೇಕು. ಇದು, ಪ್ರಪಂಚದ ವಿವಿಧ ಭಾಗಗಳಿಂದ ಬರುವವರಿಗೆ ಉಮ್ರಾವನ್ನು ಸುಲಭವಾಗಿ ನಿರ್ವಹಿಸಲು ಅವಕಾಶವನ್ನು ಒದಗಿಸುವ ಭಾಗವಾಗಿದೆ.

GCC ದೇಶಗಳಿಂದ ಆಗಮಿಸುವವರು ಮತ್ತು ಷೆಂಗೆನ್, ಅಮೇರಿಕನ್ ಮತ್ತು ಬ್ರಿಟಿಷ್ ವೀಸಾಗಳಲ್ಲಿ ಬರುವವರು ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ಇಅ್ತಮಾರ್ನಾ ಅಪ್ಲಿಕೇಶನ್ ಮೂಲಕ ಉಮ್ರಾ ನಿರ್ವಹಿಸಲು ಮತ್ತು ಮದೀನಾ ರೌಳಾದಲ್ಲಿ ಪ್ರಾರ್ಥನೆಗಾಗಿ ಬುಕ್ ಮಾಡಬಹುದು. ಸೌದಿ ಪ್ರವಾಸೋದ್ಯಮ ಇಲಾಖೆಯು( Saudi Arabia Tourism Authority) ಈ ತಿಂಗಳ 1 ರಿಂದ ಪ್ರವಾಸ ವೀಸಾ ಕಾರ್ಯವಿಧಾನಕ್ಕೆ ತಿದ್ದುಪಡಿಗಳನ್ನು ಪ್ರಕಟಿಸಿದೆ. ಹೊಸ ಘೋಷಣೆಯ ಮೂಲಕ ಉಮ್ರಾ ನಿರ್ವಹಿಸಲು ಹೆಚ್ಚು ಯಾತ್ರಾರ್ಥಿಗಳು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com