ಮಂಗಳೂರು: ವಿವಿಧ ಭಾಷೆಗಳ ಒಕ್ಕೂಟ ವ್ಯವಸ್ಥೆಯಾದ ಭಾರತದಲ್ಲಿ, ವಿವಿಧ ಭಾಷಾ ವಾರು ಪ್ರಾಂತ್ಯಗಳ ಆಧಾರದಲ್ಲಿಯೇ ರಾಜ್ಯಗಳ ಸ್ಥಾಪನೆಯಾಗಿದ್ದು, ಪ್ರಸ್ತುತ ಕೇಂದ್ರ ಸರಕಾರ ರಾಜ್ಯಗಳ ಮೇಲೆ ಖಡ್ಡಾಯ ಹಿಂದಿ ಭಾಷೆ ಯನ್ನು ಹೇರುವ ಅಪ್ರಾಯೋಗಿಕ ಪ್ರಯತ್ನ ಮಾಡುತ್ತಿರುವುದನ್ನು ದ.ಕ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ವಿವಿಧತೆಯಲ್ಲಿ ಏಕತೆ ಈ ನಾಡಿನ ಒಗ್ಗಟ್ಟಿನ ಜೀವಾಳ, ಕರ್ನಾಟಕದಲ್ಲಿ ಕನ್ನಡವೇ ಆಡು ಬಾಷೆ, ಇದರ ಮೇಲೆ ಕೇಂದ್ರ ಸರಕಾರ ಹಿಂದಿಯನ್ನು ಖಡ್ಡಾಯವಾಗಿ ಹೇರಿ, ಉತ್ತರ ಭಾರತೀಯತೆಯನ್ನು ನಮ್ಮ ಮೇಲೆ ಸವಾರಿ ಮಾಡುವ ಪ್ರಯತ್ನ ಸಹಿಸಲು ಅಸಾದ್ಯ.
ಕೇಂದ್ರ ಸರಕಾರವು ತನ್ನ ಹಿಂದಿ ಹೇರಿಕೆಯ ನಿಲುವಿನಿಂದ ಹಿಂದೆ ಸರಿಯದೆ ಇದ್ದಲ್ಲಿ, ಕರಾವಳಿ ಮತ್ತು ಮಲಬಾರ್ ಜಿಲ್ಲೆಗಳನ್ನು ಕೇಂದ್ರೀಕರಿಸಿ ತುಳು – ಕನ್ನಡ – ಮಲಯಾಳಂ ಸಮ್ಮಿಲನದಲ್ಲಿ ಗಡಿನಾಡ ಕನ್ನಡಿಗ ಕಯ್ಯಾರ ಕಿಂಞಣ್ಣ ರೈ ಮಾದರಿಯ ಪ್ರಾದೇಶಿಕ ಭಾಷಾ ಚಳುವಳಿ ಮಾಡಲಾಗುವುದು.
ಭಾಷಾ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗೆ ನಮಗೆ ಕಯ್ಯಾರ ರೈ ಅವರೇ ಮಾದರಿ. ಕಯ್ಯಾರ ರೈ ಅವರು 1997 ರಲ್ಲಿ ಮಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕನ್ನಡಿಗರಿಗೆ ನೀಡಿದ ಭಾಷಾ ಅನುಸರಣೆಯ ಮಾರ್ಗದರ್ಶನ ನಮಗೆ ಅಂತಿಮ. ಕೇಂದ್ರ ಸರಕಾರ ಅಪ್ರಾಯೋಗಿಕ ಹಿಂದಿ ಹೇರಿಕೆಯ ತನ್ನ ನಿಲುವನ್ನು ಶೀಘ್ರ ಹಿಂದಕ್ಕೆ ಪಡೆಯಬೇಕು.ಇಲ್ಲದೆ ಇದ್ದಲ್ಲಿ ಅಪ್ರಾಯೋಗಿಕ ಹಿಂದಿ ಹೇರಿಕೆಯ ವಿರುದ್ಧ ಜಿಲ್ಲೆಯಲ್ಲಿ ಸುದೃಢ ಚಳುವಳಿ ರೂಪಿಸಲಾಗುವುದು ಎಂದು ಕೆ.ಅಶ್ರಫ್ ಎಚ್ಚರಿಕೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ