ಬೆಂಗಳೂರು:(ಜನಧ್ವನಿ ವಾರ್ತೆ) ಬಹುನಿರೀಕ್ಷಿತ ಮುಸ್ಲಿಮರ ಸಾರ್ವತ್ರಿಕ ಸಂಘಟನೆ ಮುಸ್ಲಿಂ ಜಮಾಅತ್ ನ್ನು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ತರಲು ರೂಪು ರೇಷೆ ಸಿದ್ಧಗೊಂಡಿದೆ. ಮೇ ಮೊದಲ ವಾರ ಬೆಂಗಳೂರಿನಲ್ಲಿ ಕರಡ ಸಮಿತಿಯ ಘೋಷಣೆ ನಡೆಯಲಿದೆ. ರಾಜ್ಯದ 26 ಜಿಲ್ಲೆಗಳಿಂದ ಆಯ್ದ ಸಾವಿರಕ್ಕೂ ಪ್ರತಿನಿಧಿಗಳು ಭಾಗವಹಿಸುವ ಪ್ರಸ್ತುತ ಕಾರ್ಯಕ್ರಮದಲ್ಲಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯಭಾಷಣ ಮಾಡುವರು. ಎಲ್ಲ ಸುನ್ನಿ ಸಂಘಟನೆಗಳ ರಾಜ್ಯ ನಾಯಕರ ಅಪೂರ್ವ ಸಂಗಮಕ್ಕೆ ಸಿದ್ಧತೆಗಳು ಬೆಂಗಳೂರಿನಲ್ಲಿ ಈಗಾಗಲೇ ಆರಂಭಗೊಂಡಿದ್ದು; ಅದರ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿಯ ಪದಾಧಿಕಾರಿಗಳು:
ಎಸ್ ಎಸ್ ಖಾದರ್ ಹಾಜಿ(ಚೇರ್ಮೇನ್), ಹಬೀಬ್ ಕೋಯ(ಜನರಲ್ ಕನ್ವೀನರ್), ಎನ್.ಕೆ.ಎಂ.ಶಾಫಿ ಸಅದಿ (ಕೋ ಆರ್ಡಿನೇಟರ್), ಮುಹಮ್ಮದ್ ಶಾಪ್ ಆ್ಯಂಡ್ ಸೇವ್(ಕೋಶಾಧಿಕಾರಿ), ಜಲಾಲುದ್ದೀನ್ ಮುಸ್ಲಿಯಾರ್, ಮುಹಮ್ಮದ್ ಮಖ್ದೂಮಿ, ಬಶೀರ್ ಸಅದಿ, ಅಬ್ದುರ್ರಹ್ಮಾನ್ ಹಾಜಿ, ಮುನೀರ್ ಮೌಲವಿ, ತಾಜುದ್ದೀನ್ ಫಾಳಿಲಿ, ಶುಕೂರ್ ಹಾಜಿ, ಮುತ್ತಲಿಬ್ ಹಾಜಿ, ಇಬ್ರಾಹೀಂ ಸಖಾಫಿ ನಲೂರ್( ಉಪಾಧ್ಯಕ್ಷರುಗಳು), ಅಬ್ದುರ್ರಹೂಫ್ ಇಂಜಿನಿಯರ್, ಮುಜೀಬ್ ಸಖಾಫಿ, ಅಬ್ದುಲ್ ಜಲೀಲ್ ಪೀಣ್ಯ, ಮುನೀರ್ ರಾಮಮೂರ್ತಿನಗರ, ಸಬೀಉಲ್ಲಾ, ಸಿಕಂದರ್, ಫಯಾಝ್ ಪಾಶಾ, ಅಡ್ವಕೇಟ್ ಶಾಹುಲ್ ಹಮೀದ್( ಅಸಿಸ್ಟಂಟ್ ಕನ್ವೀನರ್ ಗಳು) ಮುಹಮ್ಮದ್ ಶರೀಫ್ ಮಾಸ್ಟರ್( ಅಸಿಸ್ಟಂಟ್ ಕೋಆರ್ಡಿನೇಟರ್), ಇಬ್ರಾಹೀಂ ಸಖಾಫಿ, ಇಸ್ಮಾಈಲ್ ಸಅದಿ, ಹಬೀಬ್ ಆರ್.ಟಿ.ನಗರ, ಹಮೀದ್ ಮಡಿಕೇರಿ, ಶಿಹಾಬ್ ಮಡಿವಾಳ, ಯಅ್‌ಕೂಬ್ ಶಿವಮೊಗ್ಗ(ಸದಸ್ಯರು)
ಶಿವಾಜಿ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸ್ವಾಗತ ಸಮಿತಿ ರಚನಾಸಭೆಯಲ್ಲಿ ಜಲಾಲುದ್ದೀನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. ಎಸ್ ಎಸ್ ಎ ಖಾದರ್ ಹಾಜಿ ಉದ್ಘಾಟಿಸಿದರು. *’ಮುಸ್ಲಿಂ ಜಮಾಅತ್ ಸಂಘಟನೆಯ ಅಗತ್ಯತೆ’* ಎಂಬ ವಿಷಯದಲ್ಲಿ ಶಾಫಿ ಸಅದಿ ವಿಷಯ ಮಂಡಿಸಿದರು. ಹಬೀಬ್ ಕೋಯ ಮುಂತಾದವರು ಶುಭ ಹಾರೈಸಿ ಮಾತನಾಡಿದರು. ಶರೀಫ್ ಮಾಸ್ಟರ್ ಸ್ವಾಗತಿಸಿದರು.