janadhvani

Kannada Online News Paper

ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಎ.ಪಿ.ಉಸ್ತಾದರಿಗೆ ಗೋಲ್ಡನ್ ವೀಸಾ- ಯುಎಇ ಸರ್ಕಾರದ ಗೌರವ

ದುಬೈ | ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಭಾರತದ ಗ್ರ್ಯಾಂಡ್ ಮುಫ್ತಿ ಮತ್ತು ಜಾಮಿಯಾ ಮರ್ಕಝ್ ಚಾನ್ಸೆಲರ್ ಅವರನ್ನು ಯುಎಇ ಸರ್ಕಾರವು ಗೋಲ್ಡನ್ ವೀಸಾ (UAE Golden Visa) ನೀಡಿ ಗೌರವಿಸಿದೆ. ಭಾರತ ಮತ್ತು ಇತರೆಡೆಗಳಲ್ಲಿ ಕಾಂತಪುರಂ ಉಸ್ತಾದರು ಮಾಡಿದ ಸಾಮಾಜಿಕ ಮತ್ತು ದತ್ತಿ ಕಾರ್ಯಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಯುಎಇ ಮತ್ತು ಜಾಮಿಯಾ ಮರ್ಕಝ್ ನಡುವಿನ ಅಂತರರಾಷ್ಟ್ರೀಯ ಸಂಬಂಧ, ಶೈಕ್ಷಣಿಕ ವಿನಿಮಯ ಮತ್ತು ದತ್ತಿ ಚಟುವಟಿಕೆಗಳು ಗೌರವಕ್ಕೆ ಪ್ರಮುಖ ಕಾರಣವಾಗಿವೆ.

ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಿ, ಹತ್ತು ವರ್ಷಗಳ ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರವು ನೀಡುತ್ತಿದೆ. ಶಿಕ್ಷಣ ಮತ್ತು ದತ್ತಿ ಚಟುವಟಿಕೆಗಳಿಗಾಗಿ ಭಾರತದಿಂದ ಗೋಲ್ಡನ್ ವೀಸಾ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ ಕಾಂತಪುರಂ ಉಸ್ತಾದ್.

ಭಾರತದ ಗ್ರಾಂಡ್ ಮುಫ್ತಿ, ಜಾಮಿಯಾ ಮರ್ಕಝ್ ಚಾನ್ಸೆಲರ್, ಅತ್ಯುತ್ತಮ ಸಾಮಾಜಿಕ ಲೋಕೋಪಕಾರಿ, ಮತ್ತು ಅರಬಿಕ್ ಸೇರಿದಂತೆ ಹಲವು ಭಾಷೆಗಳಲ್ಲಿ ಉಪನ್ಯಾಸ ನೀಡುವ ಅವರ ಸಾಮರ್ಥ್ಯ ಸೇರಿದಂತೆ ಅರಬ್ ಜಗತ್ತು ಮತ್ತು ಅಂತಾರಾಷ್ಟ್ರೀಯ ರಂಗಗಳಲ್ಲಿ ಕಾಂತಪುರಂ ಉಸ್ತಾದರು ಮಹತ್ವದ ಪ್ರಭಾವವನ್ನು ಹೊಂದಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ, ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ನ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೈಖ್ ಮೊಹಮ್ಮದ್ ಬಿನ್ ರಾಶೀದ್ ಆಲ್ ಮಕ್ತೂಮ್, ಮತ್ತು ಅಬುಧಾಬಿಯ ರಾಜಕುಮಾರ, ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಕಮಾಂಡರ್ -ಇನ್ -ಚೀಫ್ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಮುಂತಾದವರು ಗೋಲ್ಡನ್ ವೀಸಾಗೆ ಕೃತಜ್ಞರಾಗಿರುತ್ತಾರೆ ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com