janadhvani

Kannada Online News Paper

ಸಿರಾಜುಲ್ ಇಸ್ಲಾಂ ಜಮಾಅತ್ ಕಮಿಟಿ, SYS,SSF,SBS ಪಳ್ಳಿಮಜಲು ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಅಧ್ಯಕ್ಷರಾದ ಶಾಫಿ ಬೀಡು ರವರ ಅಧ್ಯಕ್ಷತೆ ಯಲ್ಲಿ ಜಮಾಅತ್ ಅಧ್ಯಕ್ಷರಾದ ಇಬ್ರಾಹಿಂ ಬೀಡು ಧ್ವಜಾರೋಹಣ ನೆರವೇರಿಸಿದರು.ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಸದರ್ ಮುಅಲ್ಲಿಂ ರಾಶಿದ್ ಅಹ್ಸನಿ ಸಂದೇಶ ಭಾಷಣ ಮಾಡಿದರು.ಪ್ರತಿಜ್ಞಾ ವಾಚನ ವನ್ನು SBS ಪ್ರಧಾನ ಕಾರ್ಯದರ್ಶಿ ಅಪ್ಸಲ್ ನೆರವೇರಿಸಿದರು.ಮದ್ರಸಾ ವಿಧ್ಯಾರ್ಥಿಗಳು ರಾಷ್ಟಗೀತೆ ಆಲಾಪನೆ ಮಾಡಿದರು.

ಪಸ್ತುತ ಕಾರ್ಯಕ್ರಮ ದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಲಾಲ,SYS ಪ್ರಧಾನ ಕಾರ್ಯದರ್ಶಿ ದಾವೂದ್ ಝಂಝಂ,SSF ಬೆಳ್ಳಾರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಮೀರ್ ಕಾವಿನಮೂಲೆ, SSF ಅಧ್ಯಕ್ಷರಾದ ರಾಶಿದ್ ಕಾವಿನಮೂಲೆ,SBS ಅಧ್ಯಕ್ಷರಾಗಿ ಇರ್ಷಾದ್ ಹಾಗೂ SYS,SSF ಕಾರ್ಯಕರ್ತರು,SBS ವಿಧ್ಯಾರ್ಥಿಗಳು ಹಾಜರಿದ್ದರು.

ಮದ್ರಸ ಅಧ್ಯಾಪಕರಾದ ಹುಸೈನ್ ಜೌಹರಿ ಸ್ವಾಗತಿಸಿ,SSF ಪಳ್ಳಿಮಜಲು ಶಾಖಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪಳ್ಳಿಮಜಲು ವಂದಿಸಿದರು.ಕಾರ್ಯಕ್ರಮದಲ್ಲಿ ಸಿಹಿತಿಂಡಿ ವಿತರಿಸಿ,ಮೂರು ಸ್ವಲಾತ್ ನೊಂದಿಗೆ ಮುಕ್ತಾಯಗೊಳಿಸಲಾಯಿತು.

error: Content is protected !! Not allowed copy content from janadhvani.com