janadhvani

Kannada Online News Paper

ಅಜಿಲಮೊಗರಿಗೆ ಇಂದು ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್- ಯಶಸ್ವಿಗೆ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಕರೆ

ಬಂಟ್ವಾಳ,ಜ.25: ಇತಿಹಾಸ ಪ್ರಸಿದ್ದ ಅಜಿಲಮೊಗರು ಮಾಲಿದಾ ಉರೂಸ್ ಪ್ರಯುಕ್ತ ನಡೆಯುತ್ತಿರುವಂತಹ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಇಂದು ರಾತ್ರಿ 8:00 ಗಂಟೆಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಅಜಿಲಮೊಗರಿಗೆ ಆಗಮಿಸಲಿದ್ದಾರೆ.

ಅಜಿಲಮೊಗರು ಧಾರ್ಮಿಕ ಪ್ರವಚನಕ್ಕೆ ಪ್ರಪ್ರಥಮವಾಗಿ ಆಗಮಿಸುತ್ತಿರುವ ಎಪಿ ಉಸ್ತಾದರ ಈ ಕಾರ್ಯಕ್ರಮವನ್ನು ಡಿವಿಷನ್ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು ಹಿತೈಷಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಕರೆ ನೀಡಿದೆ.

error: Content is protected !! Not allowed copy content from janadhvani.com