janadhvani

Kannada Online News Paper

ಎಲಿಮಲೆ ಯುನಿಟ್ SSF, SYS; ಮಾದರಿ ಸಾಂತ್ವನ ಚಟುವಟಿಕೆ

ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಎಲಿಮಲೆ ಯುನಿಟ್ ವತಿಯಿಂದ ಲಾಕ್ ಡೌನಿನಿಂದ ತತ್ತರಿಸಿ ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಗುರುತಿಸಿ ಕಿಟ್ ಗಳನ್ನು ವಿತರಿಸುವ ಕಾರ್ಯವು ನಡೆಯುತ್ತಿದ್ದು, ಮಾದರಿ ಚಟುವಟಿಕೆಯೆಂದು ಎಲ್ಲೆಡೆಗಳಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.

ಎಲಿಮಲೆ ಜಮಾಅತ್ ವ್ಯಾಪ್ತಿಯಲ್ಲಿರುವ ಅರ್ಹರು ಫೋನ್ ಮೂಲಕ ತಮಗೆ ಬೇಕಾದ ದಿನನಿತ್ಯದ ಅಗತ್ಯ ಆಹಾರ ಸಾಮಗ್ರಿಗಳ ಪಟ್ಟಿಯನ್ನು ನೀಡಿದರೆ ಅದನ್ನು ಗೌಪ್ಯವಾಗಿ ಮತ್ತು ಉಚಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಎಲಿಮಲೆ ಯುನಿಟ್ ವತಿಯಿಂದ ಮಾಡಲಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಈಗಾಗಲೇ ಒಂದೇ ದಿನದಲ್ಲಿ ಮೂರು ಕುಟುಂಬಗಳ ಮಾಹಿತಿ ಪಡೆದು ಅಗತ್ಯದ ಆಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ. ಜೊತೆಗೆ ಔಷಧಿಗಳನ್ನು ತಲುಪಿಸುವ ವ್ಯವಸ್ಥೆ ಕೂಡಾ ಇದೆ. ಇದಕ್ಕಾಗಿ ಊರ ಪರವೂರ ಹಲವು ಉದಾರ ದಾನಿಗಳು ಧನಸಹಾಯಗಳನ್ನು ನೀಡುತ್ತಿದ್ದಾರೆ.

ದಿನನಿತ್ಯದ ಅಗತ್ಯ ಸಾಮಗ್ರಿಗಳ ಕೊರತೆಯಿರುವವರು ಮತ್ತು ಕಿಟ್ ದಾನ ನೀಡಬಯಸುವವರು ಎಸ್.ವೈ.ಎಸ್ ಎಲಿಮಲೆ ಯುನಿಟ್ ಅಧ್ಯಕ್ಷರಾದ ಬಶೀರ್ ದೊಡ್ಡಂಗಡಿ, ಎಸ್.ಎಸ್.ಎಫ್ ಎಲಿಮಲೆ ಯುನಿಟ್ ಅಧ್ಯಕ್ಷರಾದ ಝಕರಿಯ್ಯ ಸಅದಿ, ಪ್ರ.ಕಾರ್ಯದರ್ಶಿ ಸಿದ್ದೀಖ್ ಪಿ.ಎ ಹಾಗೂ ಕೋಶಾಧಿಕಾರಿ ನಿಯಾಝ್ ದೊಡ್ಡಂಗಡಿಯವರನ್ನು ಸಂಪರ್ಕಿಸಬಹುದಾಗಿದೆ.

error: Content is protected !! Not allowed copy content from janadhvani.com