janadhvani

Kannada Online News Paper

SSF ಮತ್ತು MYG ವಾಟ್ಸಾಪ್ ಗ್ರೂಪ್: ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ

ಜಾಗತಿಕ ಮಹಾಮಾರಿ “ಕೋವಿಡ್ 19” ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SSF ಮಧ್ಯನಡ್ಕ ಶಾಖೆ ಮತ್ತು MYG whatsapp group ಮಧ್ಯನಡ್ಕ ತೊಡಗಿಕೊಂಡಿದೆ ಇದರ ಭಾಗವಾಗಿ ಮಧ್ಯನಡ್ಕ ಜಮಾಅತ್ಗೆ ಒಳಪೆಟ್ಟ ಅರ್ಹ 25+ ಬಡ ಕುಟುಂಬಗಳಿಗೆ ಮೊದಲ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು.

ಸ್ಥಳೀಯ ಖತೀಬ್ ಬಹುಮಾನ್ಯರಾದ ಮಧ್ಯನಡ್ಕ ಉಸ್ತಾದ್ ಚಾಲನೆ ನೀಡಿದರು.SSF ಮಧ್ಯನಡ್ಕ ಶಾಖೆಯ ಅಧ್ಯಕ್ಷರಾದ ಫಯಾಜ್ ಮಧ್ಯನಡ್ಕ , MYG Whatsapp group ಇದರ ಪ್ರಧಾನ ಎಡ್ಮಿನ್ ಇಕ್ಬಾಲ್ ಮಧ್ಯನಡ್ಕ,TJM ಇದರ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಮಧ್ಯನಡ್ಕ ಹಾಜರಿದ್ದರು.

ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ.

ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ SSF ಮಧ್ಯನಡ್ಕ ಯುನಿಟಿನ ಸರ್ವ ಸದಸ್ಯರಿಗೂ ಮತ್ತು MYG Whatsapp ಗ್ರೂಪ್ ಸರ್ವ ಸದಸ್ಯರಿಗೆ ಅಲ್ಲಾಹನು ಅನುಗ್ರಹ ವರ್ಷಿಸಲಿ.

error: Content is protected !! Not allowed copy content from janadhvani.com