janadhvani

Kannada Online News Paper

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಅಮಾನುಷಿಕ ಹತ್ಯಾಕಾಂಡವು ದೇಶದ ಜಾತ್ಯತೀತ ಪರಂಪರೆಗೆ ಅವಮಾನವಾಗಿದ್ದು ಕೇಂದ್ರ ಸರಕಾರ ಹಾಗೂ ಗ್ರಹಸಚಿವರು ಇದರ ವಿರುದ್ಧ ತುಟಿಬಿಚ್ಚದೆ ಗಾಢ ನಿದ್ರೆಯಲ್ಲಿರುವುದು ಸಂಶಯಾಸ್ಪದವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ಮದನಿಯವರು ತೀವ್ರವಾಗಿ ಖಂಡಿಸಿದರು.

ಈ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೊಳಿಸುವ ಷಡ್ಯಂತ್ರದ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಯುನಿಟ್ ಕೇಂದ್ರಗಳಲ್ಲಿ ನಾಳೆ (ಫೆಬ್ರವರಿ 28) ಜುಮಾ ನಮಾಝಿನ ಬಳಿಕ ಭಿತ್ತಿಪತ್ರ ಪ್ರದರ್ಶನ ಹಾಗೂ ಘೋಷಣೆಗಳು ನಡೆಯಲಿದ್ದು ಎಲ್ಲಾ ಯುನಿಟ್ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕಾಗಿ ಉಮರ್ ಅಸ್ಸಖಾಫ್ ಮದನಿ ತಿಳಿಸಿದರು.
ನಾಳೆ ಜುಮಾ ಬಳಿಕ ರಾಷ್ಟ್ರ ರಾಜಧಾನಿಯ ಶಾಂತಿಗಾಗಿ ಪ್ರತ್ಯೇಕ ಪ್ರಾರ್ಥನೆ ಮಾಡಿ ಹುತಾತ್ಮರ ಹೆಸರಲ್ಲಿ ಜನಾಝ ನಮಾಝ್ ನಿರ್ವಹಿಸಲು ಪ್ರತ್ಯೇಕವಾಗಿ ಕರೆನೀಡಲಾಗಿದೆ.

error: Content is protected !!
%d bloggers like this: