janadhvani

Kannada Online News Paper

ದೆಹಲಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ: SSF ಗುರುವಾಯನಕೆರೆ ಸೆಕ್ಟರ್ ಖಂಡನೆ

ಬೆಳ್ತಂಗಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವವರ ಮತ್ತು ಅಮಾಯಕರ ಮೇಲೆ ಕ್ರೂರ ಹಿಂಸಾಚಾರ ನಡೆಸಿ, ಅಮಾಯಕರ ಕೊಲೆ, ಸಾರ್ವಜನಿಕ ಆಸ್ತಿಗೆ ಹಾನಿ, ಪವಿತ್ರ ಮಸೀದಿ, ಮನೆಗಳಿಗೆ ಹಾನಿ, ಮೊದಲಾದ ಅಮಾನವೀಯ ಕೃತ್ಯಗಳನ್ನು ನಡೆಸಿ ರಾಷ್ಟ್ರ ರಾಜಧಾನಿಯನ್ನು ರಕ್ತಸಿಕ್ತಗೊಳಿಸಿದ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಯ ನಡೆಯು ಅತ್ಯಂತ ಖಂಡನೀಯ.

ಈ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದೆ, ಮೌನ ವಹಿಸಿ ಬಹಿರಂಗ ಬೆಂಬಲ ನೀಡುತ್ತಿರುವ ಫ್ಯಾಸಿಸ್ಟ್ ಸರಕಾರಗಳ ಧಮನೀಯ ಆಡಳಿತ ಕ್ರಮವು ಸಂವಿಧಾನದ ಅಳಿವಿಗೆ ಕಾರಣವಾಗಲಿದೆ. ಇದು ಗಾಂಧೀಜಿಯ ಅಭಯ ಭಾರತದಲ್ಲಿ ಅತ್ಯಂತ ಖೇದಕರವಾದ ಘಟನೆ ಎಂದು SSF ಗುರುವಾಯನಕೆರೆ ಸೆಕ್ಟರ್ ಸಮಿತಿ ಅಭಿಪ್ರಾಯಪಟ್ಟಿದೆ.

ಸೆಕ್ಟರ್ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು ದಿಲ್ಲಿಯ ಹಿಂಸಾಚಾರ ಕೃತ್ಯವನ್ನು, ಗಲಭೆಕೋರರಿಗೆ ಸಾಥ್ ನೀಡುತ್ತಿರುವ ಆಡಳಿತ‌ ವ್ಯವಸ್ಥೆಯನ್ನು ತಮಗೆ ಸಾಧ್ಯವಾದ ರೂಪದಲ್ಲಿ, ಶಾಂತಿಯುತರಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕವೂ ಖಂಡಿಸಬೇಕು ಮತ್ತು ಸರ್ವಶಕ್ತನಲ್ಲಿ ಗಲಭೆಪೀಡಿತ ಪ್ರದೇಶದ ಅಲ್ಪಸಂಖ್ಯಾತರ ಸಂರಕ್ಷಣೆಗಾಗಿ ಪ್ರತ್ಯೇಕ‌ ಪ್ರಾರ್ಥನೆ ನಡೆಸಬೇಕೆಂದು ಕರೆ ಕೊಟ್ಟಿದೆ.

error: Content is protected !! Not allowed copy content from janadhvani.com