janadhvani

Kannada Online News Paper

ಉಪ್ಪಿನಂಗಡಿ,ಫೆ23: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಡಿವಿಶನ್ ಇದರ ವಾರ್ಷಿಕ ಕೌನ್ಸಿಲ್, ಡಿವಿಷನ್ ಅಧ್ಯಕ್ಷರಾಗಿದ್ದ ಮಸ್ ಹೂದ್ ಸಅದಿ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್ ಕರುವೇಲಿನಲ್ಲಿ ನಡೆಯಿತು.

ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ಉದ್ಘಾಟಿಸಿದರು. ಡಿವಿಷನ್ ಕಾರ್ಯದರ್ಶಿಯಾಗಿದ್ದ ರಹ್ಮಾನ್ ಪದ್ಮುಂಜ ವರದಿ ವಾಚಿಸಿ, ಕೋಶಾಧಿಕಾರಿಯಾಗಿದ್ದ ಎಫ್.ಎಚ್ ಮಿಸ್ಭಾಹಿ ಲೆಕ್ಕ ಪತ್ರ ಮಂಡಿಸಿದರು.ಜಿಲ್ಲಾ SSF ಕೋಶಾಧಿಕಾರಿ ಅಲೀ ತುರ್ಕಳಿಕ್ಕೆ ಸಾಂಘಿಕ ಕಾರ್ಯಚಟುವಟಿಕೆಯ ಕುರಿತಾಗಿ ಮಾತನಾಡಿದರು.

ಇದೇ ಸಂದರ್ಭ ವೀಕ್ಷಕರಾಗಿ ಬಂದ ಈಸ್ಟ್ ಝೋನ್ ನಾಯಕ ಝುಬೈರ್ ಸಖಾಫಿ ನೇತೃತ್ವದಲ್ಲಿ ಹಳೇ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಯನ್ನು ಆರಿಸಲಾಯಿತು.ಅದರಂತೆ ಅಧ್ಯಕ್ಷರು :ಎಫ್. ಎಚ್ ಮುಹಮ್ಮದ್ ಮಿಸ್ಬಾಹಿ
ಉಪಾಧ್ಯಕ್ಷರು :ಇಸಾಕ್ ಮದನಿ ಅಳಕೆ, ಲತೀಫ್ ಮಾಸ್ಟರ್ ಸರಳಿಕಟ್ಟೆ
ಪ್ರಧಾನ ಕಾರ್ಯದರ್ಶಿ:ಮುಸ್ತಫಾ ಯು.ಪಿ
ಜೊತೆ ಕಾರ್ಯದರ್ಶಿ :ಶರೀಫ್ ಸಖಾಫಿ ಉಜಿರ್ ಬೊಟ್ಟು, ಎಂ.ಎಂ ಮಹ್ ರೂಫ್ ಆತೂರು
ಕೋಶಾಧಿಕಾರಿ:ಲತೀಫ್ ಕನ್ಯಾರಕೋಡಿ
ಕ್ಯಾಂಪಸ್ ಕಾರ್ಯದರ್ಶಿ:ಜುನೈದ್ ತುರ್ಕಳಿಕ್ಕೆ.

ಕಾರ್ಯಕಾರಿ ಸದಸ್ಯರು:ಮಸ್ ಊದ್ ಸಅದಿ ಪದ್ಮುಂಜ,ರಫೀಕ್ ಅಹ್ಸನಿ ಬೋವು,ಶಮೀರ್ ಸಅದಿ, ಹಕೀಂ ಕಳಂಜಿಬೈಲು, ಇಬ್ರಾಹಿಂ ಸಅದಿ, ಅಬ್ದುರ್ರಹಿಮಾನ್ ಪದ್ಮುಂಜ, ರಝಾಕ್ ಸಖಾಫಿ, ರಹೀಂ ಸಖಾಫಿ, ಹಾರಿಸ್ ಸಖಾಫಿ ಕೆಮ್ಮಾರ, ಅಶ್ರಫ್ ಉಜಿರ್ ಬೆಟ್ಟು, ಶರೀಫ್ ಕಲ್ಲಾಜೆ, ಇಕ್ಬಾಲ್ ನೀರಕಟ್ಟೆ, ಮುಸ್ತಫಾ ಸಅದಿ, ಅಶ್ರಫ್ ಮದನಿ, ನಾಸಿರ್ ಮುಈನಿ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರುವೇಲು ಸಾದಾತ್ ತಂಙಳ್, ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ,ಉಪ್ಪಿನಂಗಡಿ ಡಿವಿಶನ್ ಉಸ್ತುವಾರಿ ಸಿದ್ದೀಕ್ ಪರಪ್ಪು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಹ್ಮಾನ್ ಪದ್ಮುಂಜ ಸ್ವಾಗತಿಸಿ,ಮುಸ್ತಫಾ ಯು.ಪಿ ವಂದಿಸಿದರು.

error: Content is protected !!
%d bloggers like this: