ಉಜಿರೆ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಉಜಿರೆ ಇದರ ವಾರ್ಷಿಕ ಕೌನ್ಸಿಲ್ ಸೆಕ್ಟರ್ ಅಧ್ಯಕ್ಷರಾಗಿದ್ದ ಇಕ್ಬಾಲ್ ಮಾಚಾರುರವರ ಅಧ್ಯಕ್ಷತೆಯಲ್ಲಿ ಮಲ್ಜಅ್ ಕ್ಯಾಂಪಸ್ ಉಜಿರೆಯಲ್ಲಿ ನಡೆಯಿತು.ಸೆಕ್ಟರ್ ಉಸ್ತುವಾರಿ ಅಶ್ರಫ್ ಸಅದಿ ನಾವೂರು ಉದ್ಘಾಟಿಸಿದರು. ಸೆಕ್ಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಉಜಿರೆ ಲೆಕ್ಕಪತ್ರ ವಾಚಿಸಿ,ಕೋಶಾಧಿಕಾರಿ ಸಿದ್ದೀಕ್ ಕಾಜೂರು ಲೆಕ್ಕಪತ್ರ ಮಂಡಿಸಿದರು.
SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಮಾಚಾರು ಸಾಂಘಿಕ ಕಾರ್ಯಚಟುವಟಿಕೆಯ ಬಗ್ಗೆ ಮಾತನಡಿದರು. ಇದೇ ಸಂದರ್ಭದಲ್ಲಿ ವೀಕ್ಷಕರಾಗಿ ಬಂದ ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು ನೇತೃತ್ವದಲ್ಲಿ ಹಳೇ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು ಆರಿಸಲಾಯಿತು.
ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಉಜಿರೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವರದಿ : ಎಂ.ಎಂ.ಉಜಿರೆ