ಎಲಿಮಲೆ ಜೀರ್ಮುಕ್ಕಿ ಮುಹ್ಯದ್ದೀನ್ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತರ್ಬಿಯತ್ತುಲ್ ಇಸ್ಲಾಂ ಎಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆಯು ಬುಸ್ತಾನುಲ್ ಉಲೂಂ ಮದ್ರಸಾ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಹಸನ್ ಹರ್ಲಡ್ಕರವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ಥಳೀಯ ಇಮಾಮರಾದ ಸೂಫಿ ಮುಸ್ಲಿಯಾರ್ ರವರು ಪ್ರಾರ್ಥನೆಗೆ ನೇತೃತ್ವ ಉದ್ಘಾಟಿಸಿದರು. ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ಲ ಜಿ. ಎ. ಕೆ, ಅಧ್ಯಕ್ಷರಾಗಿ ಫೈಝಲ್ ಜೀರ್ಮುಕ್ಕಿ, ಉಪಾಧ್ಯಕ್ಷರಾಗಿ ಸೂಫಿ ಮುಸ್ಲಿಯಾರ್, ಪ್ರ. ಕಾರ್ಯದರ್ಶಿಯಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಜಿ. ಎಂ, ಕೋಶಾಧಿಕಾರಿಯಾಗಿ ಹಸನ್ ಹರ್ಲಡ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಜಿ. ಎಸ್ ಅಬ್ದುಲ್ಲ, ಸಿದ್ದೀಖ್ ಜಿ, ಹನೀಫ್ ಜಿ, ಬಾತಿಷಾ ವೈ ಹಾಗೂ ಲತೀಫ್ ಕ್ವಾಲಿಟಿ ಆಯ್ಕೆಯಾದರು.
ಜಮಾಅತ್ತಿನ ಹಿರಿಯ ನಾಯಕರಾದ ಅಬೂಬಕರ್ ಪಿ. ಎಚ್, ಮುಹಮ್ಮದ್ ಕುಂಞಿ ಹರ್ಲಡ್ಕ, ಮಸೀದಿಯ ಕೋಶಾಧಿಕಾರಿ ಯೂಸುಫ್ ಪಿ. ಎಚ್, ಸಮಿತಿಯ ಸ್ಥಾಪಕ ನಾಯಕರಾದ ಎಂ. ಕೆ ಜೀರ್ಮುಕ್ಕಿ, ಅಶ್ರಫ್ ಜಿ ಮುಂತಾದವರು ಮುಖ್ಯಾತಿಥಿಗಳಾಗಿ ಭಾಗವಹಿಸಿದ್ದರು. ಲತೀಫ್ ಕ್ವಾಲಿಟಿ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ