janadhvani

Kannada Online News Paper

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಯಲ್ಲಾಪುರಿ ಮದನಿ ಮಿಯಾ ಸಭಾ ಭವನದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಹುಬ್ಬಳ್ಳಿ ಧಾರವಾಡ ಜಿಲ್ಲಾ ಸಮೀತಿಯ ಘೋಷಣಾ ಸಭೆ ಇಂದು ನಡೆಯಿತು.
ಮೌಲಾನಾ ಅನ್ಝರ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ವಕ್ಫ್ ಮಂಡಳಿ ನಿರ್ದೇಶಕರಾದ ಮೌಲಾನಾ ಎನ್. ಕೆ.ಎಂ ಶಾಫಿ ಸಅದಿ ಉಸ್ತಾದರು ಉದ್ಘಾಟಿಸಿದರು.

ರಾಜ್ಯದ ಮುಸ್ಲಿಮರ ಧಾರ್ಮಿಕ ,ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಯ ಅಂಕಿಅಂಶವನ್ನು ಬಿಡುಗಡೆಗೊಳಿಸಿದ ಶಾಫಿ ಸಅದಿಯವರು ಅದರ ಪರಿಹಾರ ಹೇಗೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿಕೊಟ್ಟರು.

ಸಮುದಾಯ ಮತ್ತು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ಮುಸ್ಲಿಂ ಜಮಾಅತ್ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಹೇಳಿದರು. ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ಯುವಕರು ಪಾಕಿಸ್ತಾನದ ಘೋಷಣೆ ಕೂಗಿದ್ದು ಸೂಕ್ತ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರು ಎಂದು ರುಜುವತ್ತಾದರೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು,ಅದರೊಟ್ಟಿಗೆ ನ್ಯಾಯಾಲಯದ ಆವರಣದಲ್ಲಿ ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.

ಮೌಲಾನಾ ಅಖ್ತರ್ ಹುಸೈನಿ,ಮೌಲಾನಾ ಶಬನಾ ಮಿಸ್ಬಾಹಿ, ಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ ಮುಂತಾದವರು ಭಾಷಣ ಮಾಡಿದರು.ನಂತರ ನೂತನ ಜಿಲ್ಲಾ ಸಮೀತಿಯ ಘೋಷಣೆ ನಡೆಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ವಾಸಿಮ್ ಅಕ್ರಮ್ ಸಾಹೇಬ್ ಪ್ರವಾದಿ ನಿಂದಕ ಮಧುಗಿರಿ ಮೋದಿಯ ವಿರುದ್ಧ ಖಂಡನ ತರವನ್ನು ಮಂಡಿಸಿದರು. ಸಭೆಯಲ್ಲಿ ಉವೈಸ್ ಮನ್ಝರಿ ಸ್ವಾಗತಿಸಿ ಸಾಹುಲ್ ಹಮೀದ್ ಮುಸ್ಲಿಯಾರ್ ವಂದಿಸಿದರು.

error: Content is protected !!
%d bloggers like this: