janadhvani

Kannada Online News Paper

‘ಪ್ರಜಾ ಭಾರತ’ ಕ್ಕೆ ಹರೇಕಳ ಹಾಜಬ್ಬರಿಗೆ ಆಹ್ವಾನ- ತಪ್ಪು ಸಂದೇಶ ಬೇಡ

ಉಡುಪಿ: ನಾಳೆ (ಫೆ:20) ಉಡುಪಿಯಲ್ಲಿ ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ನ ರಾಜ್ಯ ಮಟ್ಟದ ‘ ಪ್ರಜಾ ಭಾರತ’ ಜನಜಾಗೃತಿ ಅಭಿಯಾನವನ್ನು ಉದ್ಘಾಟಿಸಲು ಪದ್ಮಶ್ರೀ ಪುರಸ್ಕೃತರಾಗಿರುವ ಹರೇಕಳ ಹಾಜಬ್ಬರವರನ್ನು ಆಹ್ವಾನಿಸಿದ್ದಕ್ಕೆ ಜಾಲ ತಾಣಗಳಲ್ಲಿ ಕೆಲವರ ವಿರೋಧದ ಮೆಸೇಜ್ ಗಳನ್ನು ಕಾಣಲು ಸಾಧ್ಯವಾಯಿತು.

ಪ್ರಜಾ ಪ್ರಭುತ್ವ ಕಾಯ್ದೆಗಳಿಂದ ಬಹುಜನ ಭಾರತೀಯರು ಆತಂಕಿತರಾಗಿರುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಪರಾಮರ್ಶಿಸುವುದು, ಸಂವಿಧಾನವನ್ನೇ ಪ್ರಶ್ನಿಸುತ್ತಿರುವ ಸಂದರ್ಭದಲ್ಲಿ ಅದರ ಸಂರಕ್ಷಣೆಗೆ ಅಗತ್ಯವಾದ ಮಾರ್ಗದರ್ಶನ ನೀಡುವುದು, ಜಾತಿ-ಮತ ಬೇಧವಿಲ್ಲದೆ ಭಾರತೀಯರೆಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಹರಡುವುದು, ಭಾರತದ ಸಂವಿಧಾನದ ರಕ್ಷಣೆಗೆ ವಿವಿಧ ರೀತಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು ಎಂಬಿತ್ಯಾದಿ ಉತ್ತಮ ಕಾರ್ಯಗಳನ್ನು ನಡೆಸುವುದಾಗಿದೆ ‘ಪ್ರಜಾ ಭಾರತ’ದ ಉದ್ದೇಶ.

ಧ್ವೇಷ ಬಿಟ್ಟು ದೇಶ ಕಟ್ಟು ಎನ್ನುವ ಧ್ಯೇಯವಾಕ್ಯದಡಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಇದರ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಲು ಹರೇಕಳ ಹಾಜಬ್ಬ ರವರನ್ನು ಕರೆಯಲಾಗಿದೆ ವಿನಹ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವಂತಹ ಯಾವುದೇ ರೀತಿಯ ಗೊಂದಲಗಳು ಈ ಕಾರ್ಯಕ್ರಮದಲ್ಲಿ ಇರುವುದಿಲ್ಲ. ಇಂತಹ ತಪ್ಪು ಸಂದೇಶಗಳಿಗೆ ಕಿವಿ ಕೊಡಬಾರದಾಗಿ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸುತ್ತಿದ್ದೇವೆ

ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಜಿಲ್ಲಾ ಸಂಚಾಲಕರು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ

error: Content is protected !! Not allowed copy content from janadhvani.com