janadhvani

Kannada Online News Paper

ಸೌದಿ:ಡಿಸೆಂಬರ್ ನಲ್ಲಿ ವಿದೇಶಿ ಕಾರ್ಮಿಕರಿಗೆ ವೃತ್ತಿಪರ ಪರೀಕ್ಷೆ ಆರಂಭ

ರಿಯಾದ್: ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ವಿದೇಶಿ ಕಾರ್ಮಿಕರಿಗೆ ವೃತ್ತಿಪರ ಪರೀಕ್ಷೆಗಳನ್ನು ನಡೆಸಲು ಯೋಜಿಸಿದೆ.ಡಿಸೆಂಬರ್ ನಿಂದ ಪ್ರಾರಂಭಿಸುವ ವೃತ್ತಿಪರ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಮುಂಚಿತವಾಗಿ ಪ್ರಥಮ ವರ್ಷ ಐಚ್ಛಿಕವಾಗಿರುತ್ತದೆ, ನಂತರ ಅದನ್ನು ವಿಸ್ತರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ವೃತ್ತಿಪರ ಪರೀಕ್ಷಾ ವಿಭಾಗದ ನಿರ್ದೇಶಕ ನೈಫ್ ಅಲ್-ಉಮೈರ್ ಹೇಳಿದರು.

ವೃತ್ತಿಪರ ಪರೀಕ್ಷೆ ಶುಲ್ಕವು ದೇಶದೊಳಗೆ 450-600 ಮತ್ತು ಹೊರಗೆ 100-150 ರಿಯಾಲ್ ಆಗಿರುತ್ತದೆ ಎಂದು ಯೋಜನೆಯ ಅವಲೋಕನ ಸಭೆಯಲ್ಲಿ ಸಚಿವರು ತಿಳಿಸಿದ್ದಾರೆ.ದೇಶದೊಳಗೆ 100 ರಿಯಾಲ್ ಮತ್ತು ರಾಷ್ಟ್ರದ ಹೊರಗೆ 150-200 ಆಗಿರಲಿದೆ ಎಂದೂ ವರದಿಯಿದೆ.ವಿದೇಶಗಳ ಆಯ್ದ ಕೇಂದ್ರಗಳಲ್ಲಿ ವೃತ್ತಿಪರ ಪರೀಕ್ಷೆಗಳನ್ನು ನಡೆಸಲಾಗುವುದು ಎನ್ನಲಾಗಿದೆ.

ಏಳು ದೇಶಗಳ ಕಾರ್ಮಿಕರಲ್ಲಿ ವೃತ್ತಿಪರ ಪರೀಕ್ಷೆಯನ್ನು ಮೊದಲು ಭಾರತೀಯರಿಗೆ ನೀಡಲಾಗುವುದು. ಭಾರತದ ಕಾರ್ಮಿಕರ ಸಂಖ್ಯೆ ಹೆಚ್ಚಳದ ಅನುಸಾರ ಈ ಕ್ರಮ. ಎರಡನೇ ಹಂತ ಫಿಲಿಪೈನ್ಸ್, 3 ನೇ ಹಂತ ಶ್ರೀಲಂಕಾ, ಇಂಡೋನೇಷ್ಯಾ, ಈಜಿಪ್ಟ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಹೀಗೆ ಏಳು ದೇಶಗಳನ್ನು ವರ್ಗೀಕರಿಸಲಾಗಿದೆ. ಸೌದಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 95 ಈ ದೇಶಗಳಿಂದ ಬಂದವರಾಗಿದ್ದಾರೆ.

ಮೊದಲ ಹಂತವಾಗಿ, ವಿದ್ಯುತ್, ಪ್ಲಂಬಿಂಗ್ ಕೆಲಸಗಾರರಿಗೆ ಪರೀಕ್ಷೆಗಳು ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ವಲಯದಲ್ಲಿ ಎರಡು ಲಕ್ಷ ಕಾರ್ಮಿಕರಿದ್ದಾರೆ. ಎರಡನೇ ಹಂತದ ಉದ್ಯೋಗ ಪರೀಕ್ಷೆಯು 2020ರ ಏಪ್ರಿಲ್ನ‌ಲ್ಲಿ ನಡೆಯಲಿದ್ದು, ಶೈತ್ಯೀಕರಣ, ಹವಾನಿಯಂತ್ರಣ, ಆಟೋಮೋಟಿವ್ ಎಲೆಕ್ಟ್ರಿಷಿಯನ್ ಮತ್ತು ಮೆಕ್ಯಾನಿಕ್ಸ್ ಉದ್ಯೋಗಿಗಳಿಗೆ ನಡೆಯಲಿದೆ.
ಮೂರನೇ ಹಂತದಲ್ಲಿ, ಕಾರ್ಪೆಂಟರ್, ವೆಲ್ಡಿಂಗ್ ಮುಂತಾದ ಉದ್ಯೋಗಗಳಲ್ಲಿ ಜುಲೈನಲ್ಲಿ ಪರೀಕ್ಷೆ ನಡೆಯಲಿದೆ.

ನಾಲ್ಕನೇ ಹಂತವು 2020 ರ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಗಾರೆ ಕೆಲಸ, ಪೇಂಟಿಂಗ್ ಮತ್ತು ಟೈಲ್ಸ್ ಕೆಲಸಗಳಲ್ಲಿ ವೃತ್ತಿಪರ ಪರೀಕ್ಷೆಗಳು ಮತ್ತು ಅಂತಿಮವಾಗಿ 2021ರ ಜನವರಿಯಲ್ಲಿ ಕಟ್ಟಡ ನಿರ್ಮಾಣ, ಬಾಡಿ ವರ್ಕ್ಸ್ ಮತ್ತು ತಾಂತ್ರಿಕ ಉದ್ಯೋಗಗಳಲ್ಲಿ ನಡೆಯುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಯೊಬ್ಬ ಕಾರ್ಮಿಕರಿಗೆ ಐದು ವರ್ಷಗಳ ಪ್ರಮಾಣಪತ್ರ ನೀಡಲಾಗುವುದು ಮತ್ತು ಶೇಕಡಾ 50 ಕ್ಕಿಂತ ಹೆಚ್ಚು ಕಾರ್ಮಿಕರು ವೃತ್ತಿಪರ ಪರೀಕ್ಷೆ ಪೂರ್ಣಗೊಳಿಸುವ ಕಂಪನಿಗಳೂ ಪ್ರಮಾಣಪತ್ರಗಳನ್ನು ಪಡೆಯಲಿದೆ.

ಭವಿಷ್ಯದಲ್ಲಿ, ಸೌದಿ ಅರೇಬಿಯಾದಲ್ಲಿ ಉದ್ಯೋಗ ಪಡೆಯಲು, ವೃತ್ತಿಯನ್ನು ಬದಲಾಯಿಸಲು ಮತ್ತು ಇಕಾಮಾವನ್ನು ನವೀಕರಿಸಲು ವೃತ್ತಿಪರ ಪರೀಕ್ಷೆಯನ್ನು ಷರತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸರಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ಮತ್ತು ವೀಸಾಗಳನ್ನು ನೀಡಲು ಇದನ್ನು ಕಡ್ಡಾಯಗೊಳಿಸಲಾಗುತ್ತದೆ ಎನ್ನಲಾಗಿದೆ.

error: Content is protected !! Not allowed copy content from janadhvani.com