ಯುಎಇ: ವಾಟ್ಸ್ ಆ್ಯಪ್ ಕರೆಗಳ ನಿರ್ಬಂಧವನ್ನು ಹಿಂಪಡೆಯಲು ಚಿಂತನೆ

ದುಬೈ: ಯುಎಇ ವಾಟ್ಸ್ ಆ್ಯಪ್ ಫೋನ್ ಕರೆಗಳ ನಿರ್ಬಂಧವನ್ನು ಹಿಂಪಡೆಯುವುದಾಗಿ ಪ್ರಕಟಿಸಿದ್ದು, ಯುಎಇಯ ರಾಷ್ಟ್ರೀಯ ಇಲೆಕ್ಟ್ರಾನಿಕ್ ಸೆಕ್ಯುರಿಟಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ಅಲ್-ಕುವೈತಿ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಅಂತರ್‌ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯುಇಎಯಲ್ಲಿ, ವಾಯ್ಸ್-ಓವರ್ ಇಂಟರ್ನೆಟ್ ಪ್ರೋಟೋಕಾಲ್ ಸೇವೆಗಳ ಆಧಾರದ ಮೇಲೆ ಫೋನ್ ಕರೆಗಳನ್ನು ಮಾಡಲು ಅನುಮತಿಸುವ ಸ್ಕೈಪ್, ಫೇಸ್‌ಟೈಮ್ ಮತ್ತು ವಾಟ್ಸ್ ಆ್ಯಪ್‌ನಂತಹುಗಳ ಸೇವೆಗಳನ್ನು ಯುಎಇಯಲ್ಲಿ ನಿಷೇಧಿಸಲಾಗಿದೆ.

ಯುಎಇ ಮತ್ತು ಫೇಸ್‌ಬುಕ್ ಒಡೆತನದ ವಾಟ್ಸ್ ಅ್ಯಪ್ ನಡುವಿನ ಸಹಕಾರವು ಬಲಗೊಂಡಿದೆ. ಯುಎಇಯ ಟೆಲಿಕಾಂ ನಿಯಂತ್ರಣದ ಕುರಿತು ಮಾತನಾಡಿದ ಅವರು, ವಾಟ್ಸ್ ಅ್ಯಪ್ ನ ಹಲವು ಯೋಜನೆಗಳು ಯುಎಇಯ ಹಿತಾಸಕ್ತಿಗೆ ಅನುಗುಣವಾಗಿವೆ. ವಾಟ್ಸ್ ಅ್ಯಪ್ ಧ್ವನಿ ಕರೆಗಳ ನಿಷೇಧವನ್ನು ಹಿಂಪಡೆಯುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

ಇತರ ಅನೇಕ ಕೊಲ್ಲಿ ರಾಷ್ಟ್ರಗಳು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಸೇವೆಗಳ ಬಗ್ಗೆ ತಮ್ಮ ನಿಲುವನ್ನು ಮೃದುಗೊಳಿಸಿವೆ. 2017 ರಲ್ಲಿ ವಾಟ್ಸ್ ಅ್ಯಪ್ ಕರೆಗಳ ಮೇಲಿನ ನಿಷೇಧವನ್ನು ಸೌದಿ ಅರೇಬಿಯಾ ತೆಗೆದುಹಾಕಿತು ಕತರ್ ಈಗ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ ಸೇವೆಗಳಿಗೆ ಅನುಮೋದನೆ ನೀಡಿದೆ.

ಯುಎಇಯಲ್ಲಿನ ನಿಷೇಧವು ವಾಯ್ಸ್-ಓವರ್ ಇಂಟರ್ನೆಟ್ ಪ್ರೋಟೋಕಾಲ್ ಸೇವೆಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ದೇಶದ ಕಾನೂನುಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಉಚಿತ ಸೇವೆಗಳ ಆಗಮನದಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಗಳಿಗೆ ಸಹಾಯ ಮಾಡುವ ಗುರಿಯನ್ನು ಕೂಡ ಇದು ಹೊಂದಿದೆ.

ವಲಸಿಗರು ಸೇರಿದಂತೆ ಯುಎಇ ನಿವಾಸಿಗಳು ಹೆಚ್ಚಿನ ವೆಚ್ಚದಲ್ಲಿ ಕರೆಗಳನ್ನು ಮಾಡುತ್ತಿದ್ದು, ಮಾಸಿಕ ಚಂದಾ ನೀಡಿದರೆ, ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ ಸೇವೆಗಳಾದ ಬೋಟಿಮ್, ಸಿ’ಮಿ ಮತ್ತು HiU ಮೆಸೆಂಜ್ ಅನ್ನು ಯುಇಎಯಲ್ಲಿ ಬಳಸಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!