janadhvani

Kannada Online News Paper

ಒಮಾನ್: ಔಷಧಿಗಳನ್ನು ತರುವವರು ದಾಖಲೆಗಳನ್ನು ಹೊಂದಿರಬೇಕು

ಮಸ್ಕತ್: ಒಮಾನ್‌ಗೆ ಔಷಧಿಗಳನ್ನು ತರುವವರು ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು ಎಂದು ಒಮಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಚಿಕಿತ್ಸೆ ಪಡೆದ ಆಸ್ಪತ್ರೆಯಿಂದ ಆರು ತಿಂಗಳಿಗಿಂತ ಹಳೆಯದಲ್ಲದ ವೈದ್ಯಕೀಯ ವರದಿಗಳನ್ನು ಹೊಂದಿರಬೇಕು.

ವೈದ್ಯಕೀಯ ವರದಿಯು ರೋಗಿ ಮತ್ತು ಔಷಧಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರಬೇಕು. ವೈದ್ಯಕೀಯ ವರದಿಯು ಆರು ತಿಂಗಳಿಗಿಂತ ಹೆಚ್ಚು ಹಳೆಯದಲ್ಲದಿರಬೇಕು. ಮುದ್ರೆಯಲ್ಲಿ ರೋಗಿಯ ಹೆಸರು, ವಯಸ್ಸು, ಮಾಹಿತಿ, ವೈದ್ಯರ ಸಹಿ ಮತ್ತು ಪ್ರಿಸ್ಕ್ರಿಪ್ಷನ್‌ನಲ್ಲಿರುವ ಇತರ ಮಾಹಿತಿ ಕಡ್ಡಾಯವಾಗಿ ಇರಬೇಕು.

ಪಾಸ್ಪೋರ್ಟ್ ಕಾಪಿ ಮತ್ತು ಗುರುತಿನ ಚೀಟಿ ನಕಲಿನ ಅನುಮೋದನೆಯೊಂದಿಗೆ ವೈಯಕ್ತಿಕ ಉದ್ದೇಶಗಳಿಗಾಗಿ ಕೇವಲ ಒಂದು ತಿಂಗಳ ಔಷಧಿ ಮಾತ್ರ ತರಬಹುದು. ಇದಕ್ಕಿಂತ ಹೆಚ್ಚಿನ ಔಷಧಿಗಳನ್ನು ಹೊಂದಲು, ಒಮಾನ್‌ನ ಆರೋಗ್ಯ ಸಂಸ್ಥೆಗಳ ಪರವಾನಗಿ ಹೊಂದಿರಬೇಕು.

ಪ್ರಿಸ್ಕ್ರಿಪ್ಷನ್‌ನಲ್ಲಿ ನಮೂದಿಸಿದ ಔಷಧಗಳು ಅಥವಾ ಸಮಾನ ಕಂಪನಿಯ ಇತರ ಔಷಧಿ ಮಾತ್ರ ದೀರ್ಘಕಾಲದವರೆಗೆ ತರಬಹುದು. ರೋಗಿಯ ಸಂಬಂಧಿಕರು ತರುವುದಾದಲ್ಲಿ ರೋಗಿಯ ಗುರುತಿನ ಚೀಟಿ ಪ್ರತಿ ಮತ್ತು ವಹಿಸಲಾದ ಜವಾಬ್ದಾರಿಯ ಪತ್ರದೊಂದಿಗೆ ಔಷಧಿಯನ್ನು ತರಬೇಕು. ಈ ಎಲ್ಲಾ ನಿಯಮಗಳು ಒಮಾನ್‌ ಸಂದರ್ಶಕರಿಗೂ ಅನ್ವಯಿಸುತ್ತವೆ.

error: Content is protected !! Not allowed copy content from janadhvani.com