ಮಾನವೀಯತೆ: ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ಸೌದಿ

ರಿಯಾದ್: ಸೌದಿಯು ಮಾನವೀಯ ವಿಷಯಗಳ ಬಗ್ಗೆ ಉದಾರವಾಗಿರುವ ದೇಶವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಮಾನವ ಹಕ್ಕುಗಳು ಮತ್ತು ಸೇವಾ ಕಾರ್ಯಗಳಲ್ಲಿ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿರುವ ದೇಶ ಸೌದಿ ಅರೇಬಿಯಾ ಆಗಿದೆ ಎಂದು ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.

ಮಾನವ ಹಕ್ಕುಗಳ ಬಗ್ಗೆ ಆರೋಪ ಹೊರಿಸಿ ಇತ್ತೀಚೆಗೆ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಸೌದಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಪರಿಹಾರ ಸೇವೆ ಒದಗಿಸುವ ದೇಶವಾಗಿದೆ. ಎಂಟು ಲಕ್ಷಕ್ಕೂ ಹೆಚ್ಚು ಅನಧಿಕೃತ ನಿವಾಸಿಗಳಿಗೆ ಸೌದಿ ಅರೇಬಿಯಾದಲ್ಲಿ ವಸತಿ ದಾಖಲೆಗಳನ್ನು ನೀಡಲಾಗಿದೆ.

ಐವತ್ತು ಸಾವಿರ ಜನರಿಗೆ ಅವರ ಕುಟುಂಬಗಳೊಂದಿಗೆ ಪೌರತ್ವ ನೀಡಲಾಗಿದೆ. ವಿವಿಧ ನಿರಾಶ್ರಿತರ ಸೇವೆಗಾಗಿ 18 ಬಿಲಿಯನ್ ಡಾಲರ್ ಈ ವರೆಗೆ ಖರ್ಚು ಮಾಡಲಾಗಿದೆ. ಇದಲ್ಲದೆ, ದೇಶದ ಅಕ್ರಮ ನಿವಾಸಿಗಳ ವಿರುದ್ಧ ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಪೋಷಕರು ಯಾರೆಂಬುದು ತಿಳಿಯದೆ ದೇಶದಲ್ಲಿ ಜನಿಸುವ ಮಕ್ಕಳಿಗೆ ಪೌರತ್ವವನ್ನು ನೀಡಿ ಸ್ವೀಕರಿಸಲಾಗುತ್ತಿದೆ ಎಂದು ಸಚಿವಾಲಯ ವಿವರಿಸಿದೆ.

ಇವೆಲ್ಲವೂ ಸೌದಿ ಅರೇಬಿಯಾದ ಮಾನವ ಹಕ್ಕುಗಳ ಚಟುವಟಿಕೆಗಳಿಗೆ ಜಲ್ವಂತ ಸಾಕ್ಷಿಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!