ಕೋಝಿಕೋಡ್-ಜಿದ್ದಾ ಏರ್ ಇಂಡಿಯಾ ಸೇವೆ ಪುನರಾರಂಭ

ಜಿದ್ದಾ: ಕೋಝಿಕೋಡ್‌ನಿಂದ ಏರ್ ಇಂಡಿಯಾ ವಿಮಾನ ಸೇವೆಗಳು ಈ ತಿಂಗಳು ಪುನರಾರಂಭಗೊಳ್ಳಲಿವೆ ಎನ್ನಲಾಗಿದೆ. ಆರಂಭದಲ್ಲಿ, ವಾರಕ್ಕೆ ಎರಡು ಸೇವೆಗಳು ಇರಲಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಲಿದೆ.

ಹಜ್ ನಂತರ ಕೋಝಿಕೋಡ್-ಜಿದ್ದಾ ಸೇವೆ ಪುನರಾರಂಭಗೊಳ್ಳಲಿದೆ ಎಂದು ಏರ್ ಇಂಡಿಯಾ ಈ ಹಿಂದೆ ಘೋಷಿಸಿತ್ತು. ಆದರೆ, ಏರ್ ಕ್ರಾಫ್ಟ್ ಕೊರತೆಯಿಂದಾಗಿ ಸೇವೆಗಳ ಪುನರಾರಂಭ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ, ಕೊಚ್ಚಿ-ಜಿದ್ದಾ ವಲಯದ ಎರಡು ಸೇವೆಗಳನ್ನು ರದ್ದುಗೊಳಿಸಿ ಕೋಝಿಕೋಡ್‌ಗೆ ಸೇವೆಯನ್ನು ಪುನರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

ವಾರಕ್ಕೆ ನಾಲ್ಕು ಸೇವೆಗಳನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದ್ದು, ಜಿದ್ದಾದಿಂದ ಮೊದಲ ವಿಮಾನ ಅಕ್ಟೊಬರ್ 27 ರ ರವಿವಾರ ರಾತ್ರಿ 11.15 ಕ್ಕೆ ಕೋಝಿಕೋಡ್‌‌ಗೆ ಹೊರಡಲಿದ್ದಯ, ಅದು ಮರುದಿನ ಸಂಜೆ 5.55 ಕ್ಕೆ ಕೋಝಿಕೋಡ್‌‌ನಿಂದ ಜಿದ್ದಾಗೆ ತೆರಳಲಿದೆ.

ಮುಂದಿನ ವಿಮಾನವು ಮಂಗಳವಾರ ಅದೇ ಸಮಯದಲ್ಲಿ ಜಿದ್ದಾದಿಂದ ಹೊರಡಲಿದೆ. ಅ .10 ರಂದು ಟಿಕೆಟ್ ಬುಕಿಂಗ್ ಪ್ರಾರಂಭವಾಗುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!