janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ಅಸ್ತಿತ್ವಕ್ಕೆ

ಸಹಬಾಳ್ವೆಯೇ ಸಮೃದ್ಧ ಸಮಾಜದ ಅಡಿಗಲ್ಲು – ಡಾ|MSM ಝೈನಿ ಕಾಮಿಲ್
ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿಯು ದಿನಾಂಕ 04.10.2019 ನೇ ಶುಕ್ರವಾರ ಮಧ್ಯಾಹ್ನ 3.00ಗಂಟೆಗೆ ರಾಜ್ಯ ಉಪಾಧ್ಯಕ್ಷರಾದ ಡಾ|ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ ಕಟ್ಟೆಯವರ ಘನ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯ ಸುವರ್ಣ ಆರ್ಕೇಡ್’ನಲ್ಲಿ ನಡೆಯಿತು. SJU ಅಧ್ಯಕ್ಷರಾದ ಖಾಸಿಂ ಮದನಿ, ಕರಾಯ ದುಃವಾ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ರಾಜ್ಯ ಉಪಾಧ್ಯಕ್ಷರಾದ H.I ಅಬೂಸುಫಿಯಾನ್ ಇಬ್ರಾಹಿಂ ಮದನಿ ಉದ್ಘಾಟಿಸಿದರು. ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಹಾಗೂ ಜಿಲ್ಲಾ ಕೋರ್ಡಿನೇಟರ್ ಅಶ್ರಫ್ ಕಿನಾರ ಶುಭಹಾರೈಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಎನ್ನುವುದು ಉತ್ತಮ ಸಮಾಜದ ಸಬಲೀಕರಣಕ್ಕಾಗಿ ರೂಪೀಕೃತವಾಗಿದೆ.ಸಹಬಾಳ್ವೆ ಎಂಬುವುದು ಸಮೃದ್ಧ ಸಮಾಜದ ಅಡಿಗಲ್ಲಾಗಿದೆ ಎಂದು ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಹಾಗೂ SYS ರಾಜ್ಯ ಕಾರ್ಯದರ್ಶಿಯಾದ ಡಾ|MSM ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಾಜ್ಯ ಉಪಾಧ್ಯಕ್ಷರಾದ ಡಾ|ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್’ಕಟ್ಟೆ ಘೋಷಿಸಿದರು.
ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಾಜೂರು,
ಅದ್ಯಕ್ಷರಾಗಿ ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ,
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫಿ ಬೆಳ್ತಂಗಡಿ,
ಕೋಶಾಧಿಕಾರಿಯಾಗಿ ಎ. ಕೆ ಅಹ್ಮದ್ ಡೆಲ್ಮಾ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಬಿ.ಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಉಪಾಧ್ಯಕ್ಷರುಗಳಾಗಿ ಅಬ್ಬೋನು ಮದ್ದಡ್ಕ,ಬಿ.ಎ ನಝೀರ್ ಬೆಳ್ತಂಗಡಿ, ಅಬ್ದುಲ್ ರಹ್ಮಾನ್ ಅಳಕೆ, ಹಸನಬ್ಬ ಚಾರ್ಮಡಿ, ಕಾರ್ಯದರ್ಶಿಗಳಾಗಿ‌ ಅಲಿಯಬ್ಬ ಪುಲಾಬೆ, ಅಶ್ರಫ್ ಮದ್ದಡ್ಕ, ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರ್, ಖಲಂದರ್ ಪದ್ಮುಂಜ, ಮುಹಿಯ್ಯುದ್ದೀನ್ ಉಜಿರೆ, ಹಾಗೂ 33 ಸದಸ್ಯರು ಮತ್ತು 7 ಬ್ಲಾಕ್ ಕೊ-ಆರ್ಡಿನೇಟರ್’ಗಳ ಸಮಿತಿ ರಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಮೊಹಲ್ಲಾಗಳ ಅಡಳಿತ ಸಮಿತಿಯ ಪದಾಧಿಕಾರಿಗಳು,ಸಮಾಜ ಸೇವಕರು,ವಿವಿಧ ಸುನ್ನಿ ಕುಟುಂಬದ ನಾಯಕರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಮುಸ್ಲಿಂ ಜಮಾಅತ್ ಜಿಲ್ಲಾ ಕೋರ್ಡಿನೇಟರ್ ಎಂ.ಬಿ.ಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು.ಜಿಲ್ಲಾ ನಾಯಕರಾದ ಅಬ್ಬಾಸ್ ಬಟ್ಲಡ್ಕ ಕೊನೆಯಲ್ಲಿ ಧನ್ಯವಾದವಿತ್ತರು.SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು.

✍ಎಂ.ಎಂ.ಉಜಿರೆ

error: Content is protected !! Not allowed copy content from janadhvani.com