ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಪ್ರತಿಭೋತ್ಸವ-20, ಜನವರಿ 11,12 @ ಉಪ್ಪಿನಂಗಡಿ

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರತಿಭೋತ್ಸವವು ಈ ಬಾರಿ ಜನವರಿ 11,12 ರಂದು ಉಪ್ಪಿನಂಗಡಿಯಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ.

ಜಿಲ್ಲಾ ವ್ಯಾಪ್ತಿಯ 11 ಡಿವಿಶನ್‌ಗಳಲ್ಲಿ ಜನವರಿ 5 ಪ್ರತಿಭೋತ್ಸವ ಮುಗಿಯಲಿದ್ದು, ಡಿವಿಶನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ಸ್ಪರ್ಧಾಳುಗಳಿಗೆ ಜಿಲ್ಲಾ ಮಟ್ಟದಲ್ಲಿ ಜನವರಿ 11, 12 ಪ್ರತಿಭೋತ್ಸವ ನಡೆಯಲಿದೆ. ಹಲವು ಹೊಸ ಸ್ಪರ್ಧೆ ಹೆಚ್ಚಾಗಿರುವುದು ಈ ಬಾರಿಯ ಪ್ರತಿಭೋತ್ಸವಕ್ಕೆ ಮೆರುಗು ನೀಡಿದೆ. ಪ್ರತಿಭೊತ್ಸವ ಮೂಲಕ ಕಳೆದ ಅವಧಿಯಲ್ಲಿ ಉತ್ತಮ ಪ್ರತಿಭೆಗಳನ್ನು ಸಮಾಜಕ್ಕೆ ಸಮರ್ಪಿಸಲು ಸಂಘಟನೆಗೆ ಸಾಧ್ಯವಾಗಿದೆ.

ಜಿಲ್ಲಾ ಮಟ್ಟದಲ್ಲಿ ಪ್ರತಿಷ್ಠಿತ 11 ಡಿವಿಶನ್‌ಗಳು ಸ್ಪರ್ಧಿಸಲಿದ್ದು,ಈ ಬಾರಿಯು ವಿಶಿಷ್ಟವಾದ ಹಲವಾರು ನವ ಸ್ಪರ್ಧೆಗಳು ನಡೆಯಲಿರುವುದರಿಂದ ಈ ಬಾರಿಯ ಪ್ರತಿಭೋತ್ಸವ ಬಹಳ ಆಕರ್ಷಣೀಯ ರೀತಿಯಲ್ಲಿ ನಡೆಯಲಿದೆ.

ಎಂದು ಜಿಲ್ಲಾ ಪ್ರತಿಭೋತ್ಸವ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಕೆ‌.ಎಸ್.ದಾವೂದುಲ್ ಹಕೀಂ ಕಳಂಜಿಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!