ಸೌದಿ ಅರೇಬಿಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಮದೀನಾ ಮುನವ್ವರ ಝೋನ್ ಇದರ ಕಾರ್ಯಕಾರಿ ಸಮಿತಿಯ ಸಭೆಯು ದಿನಾಂಕ 04.10.2019 ರಂದು ಯಾಂಬುವಿನ ಕೆ.ಸಿ.ಎಫ್ ಭವನದಲ್ಲಿ ಮದೀನಾ ಝೋನ್ ಅಧ್ಯಕ್ಷರಾದ ಹಮೀದ್ ಉಸ್ತಾದ್ ಕರಾಯ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.


ಝೋನ್ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾದ ಇಕ್ಬಾಲ್ ಸ’ಅ’ದಿ ಕಾಟಿಪಳ್ಳ ರವರು ಖಿರಾ’ಅತ್ ಪಠಿಸುವ ಮೂಲಕ ಪ್ರಾರಂಭಿಸಿದ ಸಭೆಯನ್ನು ಮದೀನಾ ಮುನವ್ವರ ಸೆಕ್ಟರ್ ಅದ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು.


ಸಭೆಯಲ್ಲಿ .. ಮದೀನಾದಲ್ಲಿ ಕೆ.ಸಿ.ಎಫ್ HVC (ಹಜ್ಜ್ ವ್ಯಾಲೆಂಟೀರ್ ಕೋರ್) ಗಾಗಿ ಸುಮಾರು ಐದಾರು ವರ್ಷಗಳಿಂದ ನಿರಂತರ ಕಾರ್ಯಾಚರಿಸಿದ ಮದೀನಾ ಸೆಕ್ಟರ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಉಳ್ಳಾಲ್ ರವರನ್ನು KCF ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ನೀಡಿದ ಅಭಿನಂದನಾ ಫಲಕವನ್ನು ಝೋನ್ ಸಮಿತಿಯ ನಾಯಕರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.


ಅ

ದೇ ರೀತಿ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ಇಲಾಖೆಯ ನಾಯಕರಾದ ತಾಜುದ್ದೀನ್ ಸುಳ್ಯ, ಜಬ್ಬಾರ್ ಉಳ್ಳಾಲ್, ಹಾಗೂ ಇಕ್ಬಾಲ್ ಕುಪ್ಪೆಪದವು ಅವರಿಗೂ ಝೋನ್ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಶ್ರಫ್ ಹಾಜಿ ಕಿನ್ಯ, ಯಾಂಬು ಸೆಕ್ಟರ್ ಅದ್ಯಕ್ಷರಾದ ಇಕ್ಬಾಲ್ ಅಲ್ ಫಲಾಹ್, ತಬೂಕ್ ಸೆಕ್ಟರ್ ಅದ್ಯಕ್ಷರಾದ ಅಬ್ಬೋನ್ ಮಂಜೇಶ್ವರ ಸಹಿತ ಝೋನ್ ಸಮಿತಿಯ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯನ್ನು ಕೆ.ಸಿ.ಎಫ್ ಮದೀನಾ ಮುನವ್ವರ ಝೋನ್ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಮಾಪಲ್ ಸ್ವಾಗತಿಸಿದರು. ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿ ಫಯಾಝ್ ಪಕ್ಷಿಕೆರೆ ಧನ್ಯವಾದಗೈದರು.
ವರದಿ:
ಆಸಿಫ್ ಬದ್ಯಾರ್















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ