ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್: 31 ಕೋಟಿಗೂ ಹೆಚ್ಚು ಪ್ರತಿಗಳ ವಿತರಣೆ

ರಿಯಾದ್: ಮದೀನಾದಲ್ಲಿರುವ ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ ಎಂದರೆ ಅದು ಮುಸ್ಲಿಮರ ಪವಿತ್ರ ಗ್ರಂಥವಾದ ಖುರ್‌ಆನ್ ಮತ್ತಿತರ ಅನುಭಂದಿತ ಗ್ರಂಥಗಳ ಮುದ್ರಣಾಲಯವಾಗಿದೆ.

ಅಧಿಕೃತ ಮಾಹಿತಿಯಂತೆ 1984ರಲ್ಲಿ ಪ್ರಾರಂಭಗೊಂಡ ಈ ಮುದ್ರಣಾಲಯದಿಂದ ಕಳೆದ ರಮಝಾನ್ ವರೆಗೆ ಇಪ್ಪತ್ತೈದು ವರ್ಷಗಳಲ್ಲಿ 31,71,59,631 ಖುರ್‌ಆನ್ ಪ್ರತಿಗಳನ್ನು ಪ್ರಕಟಿಸಲಾಗಿದೆ.

ಈ ಪೈಕಿ ಪ್ರತ್ಯೇಕ ಭಾಗಗಳ ಕಾಪಿಗಳು, ಪವಿತ್ರ ಖುರ್‌ಆನಿನ ತರ್ಜುಮೆಗಳು ಸೇರಿವೆ. ಕಳೆದ ರಮಝಾನ್‌ನಲ್ಲಿ 1,87,707 ಖುರ್‌ಆನ್ ಗ್ರಂಥ ಗಳನ್ನು ವಿತರಿಸಲಾಗಿದೆ.

ವಿವಿಧ ದೇಶಗಳಲ್ಲಿರುವ ಸೌದಿ ದೂತಾವಾಸ, ಎಂಬಸ್ಸಿ ಮುಖಾಂತರ ಇಸ್ಲಾಮಿಕ್ ಸಂಘಟನೆಗಳ ಮೂಲಕ ಪವಿತ್ರ ಗ್ರಂಥಗಳನ್ನು ತಲುಪಿಸಲಾಗುತ್ತಿದೆ. ಅತ್ಯಂತ ಗುಣಮಟ್ಟದಲ್ಲಿ ಪ್ರಕಟಿಸಲಾಗುವ ಗ್ರಂಥಗಳಿಗೆ ಉಪಯೋಗಿಸುವ ಹಾಳೆಗಳು ಮತ್ತು ಶಾಯಿ ಮತ್ತಿತರ ವಸ್ತುಗಳು ಉನ್ನತ ಗುಣಮಟ್ಟದ್ದಾಗಿದೆ.

ಇದನ್ನೂ ಓದಿರಿ..

Leave a Reply

Your email address will not be published. Required fields are marked *

error: Content is protected !!