janadhvani

Kannada Online News Paper

ಕಿಂಗ್ ಫಹದ್ ಖುರ್‌ಆನ್ ಮುದ್ರಣ ಕೇಂದ್ರ: ಸಂದರ್ಶಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಈ ವರದಿಯ ಧ್ವನಿಯನ್ನು ಆಲಿಸಿ


ಮದೀನಾ: ಅಭಿವೃದ್ಧಿಯ ಅಂಗವಾಗಿ ಮುಚ್ಚಲ್ಪಟ್ಟಿದ್ದ ಕಿಂಗ್ ಫಹದ್ ಖುರ್‌ಆನ್ ಮುದ್ರಣ ಕೇಂದ್ರವನ್ನು ತೆರೆಯಲಾಗಿದ್ದು, ಸಂದರ್ಶನಕ್ಕಾಗಿ ಆಗಮಿಸುವ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.

ಖುರ್‌ಆನ್ ಮುದ್ರಣದೊಂದಿಗೆ ಸಂಶೋಧನಾ ಕೇಂದ್ರ ಮತ್ತು ರೆಕಾರ್ಡಿಂಗ್ ವ್ಯವಸ್ಥೆಗಳು ಕೂಡಾ ಅಲ್ಲಿದ್ದು, 1,000 ಕ್ಕೂ ಮಿಕ್ಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಪ್ರೆಸ್ , ಮದೀನಾದ ತಬೂಕ್ ರಸ್ತೆಯಲ್ಲಿದೆ. ಈ ಇನ್ಸ್ಟಿಟ್ಯೂಟ್ ನ್ನು 1984 ರಲ್ಲಿ ಸ್ಥಾಪಿಸಲಾಯಿತು. ಇದನ್ನು ನೇರವಾಗಿ ಸೌದಿ ಧಾರ್ಮಿಕ ವ್ಯವಹಾರಗಳ ಇಲಾಖೆ ನಡೆಸುತ್ತದೆ. ಇಲ್ಲಿ ಖುರ್‌ಆನ್ ಅಕ್ಷರಗಳನ್ನು ತಯಾರಿಸುವುದು, ಕುರ್‌ಆನ್ ಶಬ್ದವನ್ನು ರೆಕಾರ್ಡ್ ಮಾಡುವುದು, ಸಂಶೋಧನೆ ಮತ್ತು ಅನುವಾದ ಕೇಂದ್ರ, ಮೊಬೈಲ್ ಅಪ್ಲಿಕೇಶನ್ ತಯಾರಿ ಮುಂತಾದವುಗಳನ್ನು ಮಾಡಲಾಗುತ್ತದೆ.

ಬ್ರೈಲಿ ಲಿಪಿಯಲ್ಲೂ ಖುರ್‌ಆನ್ ಮುದ್ರಣವನ್ನು ಮಾಡಲಾಗುತ್ತದೆ. ಸುಮಾರು 1100 ನೌಕರರ ಪೈಕಿ 700 ಉದ್ಯೋಗಿಗಳು ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 86 ಶೇಕಡಾ ನೌಕರರು ಸ್ಥಳೀಯರಾಗಿದ್ದಾರೆ. ಈ ಕೇಂದ್ರದಲ್ಲಿ 260 ಮದ್ರಣಗಳಲ್ಲಿ ಕಳೆದ ವರ್ಷ 320 ದಶಲಕ್ಷ ಖುರ್‌ಆನ್ ಪ್ರತಿಗಳನ್ನು ಮುದ್ರಿಸಲಾಗಿತ್ತು.
ಈ ಮಧ್ಯೆ ಅಭಿವೃದ್ಧಿಗೋಸ್ಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಇದೀಗ ಮಹಿಳೆಯರಿಗೂ ಪ್ರವೇಶ ಅನುಮತಿಸಲಾಗಿದೆ. ಪ್ರತಿ ಸಂದರ್ಶಕರಿಗೆ ಖುರ್‌ಆನ್ ಪ್ರತಿಯನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತದೆ.

error: Content is protected !! Not allowed copy content from janadhvani.com