janadhvani

Kannada Online News Paper

ಟೆಹ್ರಾನ್ : ತಮ್ಮ ಮೇಲೆ ಅಮೆರಿಕ ದಾಳಿ ಮಾಡಿದರೆ ನಾವು ತಕ್ಕ ತಿರುಗೇಟು ನೀಡಬೇಕಾಗುತ್ತದೆ ಎಂದು ಇರಾನ್ ಅಮೆರಿಕಕ್ಕೆ ಶನಿವಾರ ಪ್ರತಿಎಚ್ಚರಿಕೆ ನೀಡಿದೆ. ಅಮೆರಿಕದ ಡ್ರೋಣ್ ಅನ್ನು ಇಸ್ಲಾಮಿಕ್ ರಾಷ್ಟ್ರ ಹೊಡೆದುರುಳಿಸಿದ ಮೇಲೆ ಎರಡೂ ರಾಷ್ಟ್ರಗಳ ನಡುವೆ ಯುದ್ಧಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಪರಿಧಿಯೊಳಗೆ ಅತಿಕ್ರಮಿಸಿದೆಯೆಂದು ಅಮೆರಿಕದ ಗ್ಲೋಬರ್ ಹಾಕ್ ಸರ್ವೇಲನ್ಸ್ ಡ್ರೋಣ್ ಅನ್ನು ಇರಾಕ್ ನ ಮಿಸೈಲ್ ಹೊಡೆದುರುಳಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಮೆರಿಕ, ತಮ್ಮ ಡ್ರೋಣ್ ಅಂತಾರಾಷ್ಟ್ರೀಯ ವಾಯುಪ್ರದೇಶದೊಳಗೆ ಹಾರಿಸಿರುವುದಾಗಿ ಅಮೆರಿಕ ಪ್ರತಿಕ್ರಿಯೆ ನೀಡಿತ್ತು.

ಇರಾನ್ ಮಾಡಿದ ದಾಳಿಗೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಯುದ್ಧ ಸಾರುವ ಹುನ್ನಾರದಲ್ಲಿದ್ದರು. ಒಂದು ವೇಳೆ ದಾಳಿ ಮಾಡಿದ್ದರೆ ಕನಿಷ್ಠ 150 ಜನ ಸಾಯುವ ಆತಂಕವಿದ್ದಿದ್ದರಿಂದ, ದಾಳಿಗೆ ನಿಗದಿಪಡಿಸಿದ ಸಮಯಕ್ಕೆ 10 ನಿಮಿಷ ಮುನ್ನ ದಾಳಿಯ ನಿರ್ಧಾರವನ್ನು ಹಿಂಪಡೆದಿದ್ದರು.

ತಾವು ಈ ಕುರಿತು ಟೆಹರಾನ್ ಜೊತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿಯೂ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಅಲ್ಲದೆ, ಇರಾನ್ ಮೇಲೆ ಯುದ್ಧ ಸಾರುವ ಹಪಹಪಿ ತಮಗಿಲ್ಲ ಎಂದು ಹೇಳಿಕೆ ಅವರು ನೀಡಿದ್ದರು, ವಾಷಿಂಗ್ಟನ್ ಮತ್ತು ಟೆಹರಾನ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ತಮಗೂ ಯುದ್ಧ ಬೇಕಾಗಿಲ್ಲ, ಆದರೆ, ದಾಳಿ ಮಾಡಿದರೆ ಹೊಸಕಿ ಹಾಕುತ್ತೇವೆ ಎಂದು ಇರಾನ್ ತಿರುಗೇಟು ನೀಡಿದೆ.

error: Content is protected !! Not allowed copy content from janadhvani.com