ಕೆಸಿಎಫ್ ಯುಎಇ: ನೂತನ ರಾಸ್ ಅಲ್ ಖೈಮಾ ಘಟಕ ಅಸ್ಥಿತ್ವಕ್ಕೆ

ರಾಸಲ್ ಖೈಮಾ: ಅನಿವಾಸಿ ಕನ್ನಡಿಗರ ಸಾಂಸ್ಕ್ರತಿಕ ಸಂಗಮ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ಇದೀಗ ಆರು ಘಟಕಳನ್ನು ಒಳಗೊಂಡಿದ್ದು, ಈ ಮೊದಲು ರಾಸ್ ಅಲ್ ಖೈಮಾದಲ್ಲಿ ಮೂರು ಶಾಖೆಗಳು ಕಾರ್ಯಾಚರಿಸುತ್ತಿದ್ದು ಇದೀಗ ಏಳನೇ ಘಟಕವಾಗಿ ನೂತನ ರಾಸ್ ಅಲ್ ಖೈಮಾ ಘಟಕವನ್ನು ಕಳೆದ ಶುಕ್ರವಾರ (ದಿನಾಂಕ 14/06/19) ರಾಸ್ ಅಲ್ ಖೈಮಾ ಜ್ಯೂಸ್ ವರ್ಲ್ಡ್ ಹೋಟೆಲ್ ಸಭಾಂಗಣದಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಕೆಸಿಎಫ್ ಯುಎಇ ಅಧ್ಯಕ್ಷರಾದ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ರವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಎಫ್) ರಾಸ್ ಅಲ್ ಖೈಮಾ ಘಟಕದ ಅಧ್ಯಕ್ಷರಾದ ಶಮೀರ್ ಅವೇಲಂ ಉದ್ಘಾಟಿಸಿದರು.
ಕೆಸಿಎಫ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿಯವರು ಮಾತನಾಡಿ ಕೆಸಿಎಫ್ ನಲ್ಲಿ ಸಕ್ರೀಯನಾಗುವ ಬಗ್ಗೆ ಸವಿವರವಾಗಿ ಮಾತನಾಡಿದರು.
ನಂತರ ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್ ಕೆಸಿಎಫ್ ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು
ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಕರೀಂ ಮುಸ್ಲಿಯಾರ್ ಉರುವಾಲ್ ಪದವು ನೂತನ ಸಮಿತಿಗೆ ಚಾಲನೆ ನೀಡಿದರು, ವೆಲ್ಫೇರ್ ಛೇರ್ಮನ್ ಇಬ್ರಾಹಿಂ ಬ್ರೈಟ್ ಮಾರ್ಬಲ್, ಪಬ್ಲಿಕೇಷನ್ ಚೇರ್ಮನ್ ಝಯಿನುದ್ದೀನ್ ಹಾಜಿ ಬೆಳ್ಳಾರೆ, ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿದರು,
ಖಾದರ್ ಸಅದಿ ಸುಳ್ಯ, ಶಕೂರ್ ಮಣಿಲ, ಕರೀಂ ಹಾಜಿ ಬಿಕರ್ನಕಟ್ಟೆ,ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರ್ ಸಹಿತ ಹಲವಾರು ನಾಯಕರು ಉಪಸ್ಥಿತರಿದ್ದರು.

ಸಂಘಟನಾ ವಿಭಾಗ ಚೇರ್ಮನ್ ಮೂಸ ಹಾಜಿ ಬಸರ ಸ್ವಾಗತಿಸಿ ಕನ್ವಿನರ್ ಖಲಂದರ್ ಕಬಕ ಕಾರ್ಯಕ್ರಮ ನಿರ್ವಹಿಸಿದರು ನೂತನ ಕಾರ್ಯದರ್ಶಿ ಮಹಮ್ಮದ್ ಅಫ್ಝಲ್ ಮಂಗಳೂರ್ ಧನ್ಯವಾದ ಸಮರ್ಪಿಸಿದರು.

ನೂತನ ಸಮಿತಿ ಈ ಕೆಳಗಿನಂತಿದೆ

ಅಧ್ಯಕ್ಷರು : ಹನೀಫ್ ಮುಸ್ಲಿಯಾರ್ ಎನ್ಮೂರ್
ಕಾರ್ಯದರ್ಶಿ : ಮಹಮ್ಮದ್ ಅಫ್ಝಲ್ ಮಂಗಳೂರು
ಕೋಶಾಧಿಕಾರಿ :ಮೊಹಮ್ಮದ್ ಅಲಿ ಹೆಜಮಾಡಿ
ಸಂಘಟನಾ ಚೇರ್ಮನ್ :ಶರಫುದ್ದೀನ್ ಅಡ್ಡೂರ್
ಸಂಘಟನಾ ಕನ್ವಿನರ್ : ಮುಶ್ತಾಕ್ ಉಳ್ಳಾಲ
ಶಿಕ್ಷಣ ವಿಭಾಗ ಚೇರ್ಮನ್ : ಮೂಸಾ ಲತೀಫಿ ಆನೇಕಲ್
ಶಿಕ್ಷಣ ವಿಭಾಗ ಕನ್ವಿನರ್ : ಬಷೀರ್ ವರ್ಕಾಡಿ
ಆಡಳಿತ ವಿಭಾಗ ಚೇರ್ಮನ್ : ಅಬ್ದುಲ್ಲಾ ಕಡವತ್ ಎಂಕೆ
ಆಡಳಿತ ವಿಭಾಗ ಕನ್ವಿನರ್ : ಜಾಬಿರ್ ಮಹಮ್ಮದ್ ಪೆರಿಯಪಾದೆ
ವೆಲ್ಫೇರ್ ಚೇರ್ಮನ್ :ಶುಕೂರ್ ಬೋಳಿಯಾರ್
ವೆಲ್ಫೇರ್ ಕನ್ವಿನರ್ : ಅಬ್ದುಲ್ ರಝಾಕ್ ಸಿ.ಎ ಕಾಜೂರ್
ಪಬ್ಲಿಕೇಷನ್ ಚೇರ್ಮನ್ :ಹಸನಬ್ಬ ಗಂಟಾಲ್ಕಟ್ಟೆ
ಪಬ್ಲಿಕೇಷನ್ ಕನ್ವಿನರ್ : ಮುಸ್ತಾಫಾ ಕಿನ್ಯ
ಇಹ್ಸಾನ್ ಚೇರ್ಮನ್ :ಅಶ್ರಫ್ ಉಪ್ಪಳ
ಇಹ್ಸಾನ್ ಕನ್ವಿನರ್ : ಸಲಾಂ ಕಕ್ಕಿಂಜೆ
ಮತ್ತು
ಕಾರ್ಯಕಾರಿ ಸಮಿತಿ ಸದಸ್ಯರು

Leave a Reply

Your email address will not be published. Required fields are marked *

error: Content is protected !!