janadhvani

Kannada Online News Paper

ಜೂ.16:ಕೊಡಂಗಾಯಿ ಟಿಪ್ಪು ನಗರಕ್ಕೆ ಸಮಸ್ತ ಉಪಾಧ್ಯಕ್ಷರಾದ ತಾಜುಶ್ಶರೀಅಃ ಅಲೀ ಕುಞ್ಞಿ ಉಸ್ತಾದ್

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಕ್ಯಾಂಪಸ್ಸಿನಲ್ಲಿ ಕಾರ್ಯಾಚರಿಸುತ್ತಿರುವ ದಅವಾ ರಂಗದಲ್ಲಿ ಯಶಸ್ವಿ ನಾಲ್ಕು ವರ್ಷಗಳನ್ನು ದಾಟಿ ಐದನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ದರ್ಸ್ ಪ್ರಾರಂಭೋತ್ಸವವು ಇಂದು (ಜೂ.16) ರಾತ್ರಿ ಗಂಟೆ 8ಕ್ಕೆ ಟಿಪ್ಪು ನಗರ ದಾರುನ್ನಜಾತ್ ಕ್ಯಾಂಪಸ್ಸಿನಲ್ಲಿ ವಿಶ್ವವಿಖ್ಯಾತ ಪಂಡಿತ ಕೂಟ ಸಮಸ್ತ ಕೇರಳ ಜಂಯ್ಯತುಲ್ ಉಲಮದ ಉಪಾಧ್ಯಕ್ಷರಾದ ಬಹು: ಶೈಖುನಾ ತಾಜುಶ್ಶರೀಅಃ ಅಲಿಕುಂಞ ಉಸ್ತಾದ್ ಅವರ ನೇತ್ರತ್ವದಲ್ಲಿ ನಡೆಯಲಿದೆ.

ದಾರುನ್ನಜಾತ್ ಮುದರ್ರಿಸರಾದ ಬಹು: ಮುಹಮ್ಮದ್ ಫಾಲಿಳಿ ಅಲ್ ಕಾಮಿಲ್ ಸಖಾಫಿ ಉಸ್ತಾದರು ಉಪನ್ಯಾಸ ಮಾಡಲಿದ್ದಾರೆ. ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷರಾದ ಶ್ಯೆಖುನಾ ಪಿ ಕೆ ಅಬೂಬಕ್ಕರ್ ಮುಸ್ಲಿಯಾರ್, ದಾರುಲ್ ಅಶ್ಅರಿಯ್ಯಾ ಸುರಿಬ್ಯೆಲ್ ಅಧ್ಯಕ್ಷರಾದ ಶೈಖುನಾ ಕೆ.ಎ ಮಹ್ಮೂದುಲ್ ಫೈಝಿ ವಾಲೆಮೊಂಡವು ಉಸ್ತಾದ್, ದಾರುನ್ನಜಾತ್ ಮಹಿಳಾ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ ಹಾಗೂ ಇನ್ನಿತರ ಪ್ರಮುಖ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com