janadhvani

Kannada Online News Paper

ಕೆ.ಸಿ.ಎಫ್ ದಮ್ಮಾಮ್ ಅಲ್ ಅಹ್ಸಾ ಸೆಕ್ಟರ್: ಬೃಹತ್ ಇಫ್ತಾರ್ ಸಂಗಮ

ಈ ವರದಿಯ ಧ್ವನಿಯನ್ನು ಆಲಿಸಿ


ಕೆ.ಸಿ.ಎಫ್ ಅಲ್ ಅಹ್ಸಾ ಸೆಕ್ಟರ್ ವತಿಯಿಂದ ವರ್ಷಂಪ್ರತೀ ನಡೆಸುವ ಇಫ್ತಾರ್ ಸಂಗಮ ಈ ವರ್ಷವೂ ದಿ 24/05/19 ರಂದು ಅಲ್ ಅಹ್ಸಾದ ಸಅದಿಯ ಹಾಲ್ ನಲ್ಲಿ ವಿಂಜ್ರಂಭಣೆಯಿಂದ ನಡೆಯಿತು.

ಅದಕ್ಕೂ ಮುಂಚಿತವಾಗಿ ಸೆಕ್ಟರ್ ಅಧ್ಯಕ್ಷ ಹಬೀಬ್ ಉಸ್ತಾದರ ಸಭಾಧ್ಯಕ್ಷತೆಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ನಡೆಯಿತು, ಸಭೆಯನ್ನು ಉದ್ದೇಶಿಸಿ ನೌಶಾದ್ ಅಮಾನಿ ಉಸ್ತಾದ್ ಮಾತನಾಡುತ್ತಾ ದೀನೀ ಚೈತನ್ಯ ಅಂತ್ಯ ದಿನದವರೆಗೆ ನೆಲೆ ನಿಲ್ಲಬೇಕಾದರೆ ಕೆ.ಸಿ.ಎಫ್ ನಂತಹ ಸುನ್ನೀ ಸಂಘಟನೆಗಳು ಅತ್ಯಗತ್ಯ ಎಂದು ಹೇಳಿದರು.

ಆ ನಂತರ ನಡೆದ ಬೃಹತ್ ಇಫ್ತಾರ್ ಸಂಗಮವನ್ನು ಉದ್ದೇಶಿಸಿ ಮಾತನಾಡಿದ ಸುನ್ನೀ ಸಂಘ ಸಂಸ್ಥೆ ಗಳ ನಾಯಕ ಅಬೂಬಕ್ಕರ್ ಮೊಗ್ರಾಲ್ ಉಸ್ತಾದ್ ರವರು ಕೆ.ಸಿ.ಎಫ್ ನಡೆಸುತ್ತಿರುವ ಸಾಂತ್ವನ, ದಅ್’ವ ಕಾರ್ಯಗಳು ಅವರ್ಣನೀಯ, ದೀನ್ ಏನೆಂದರಿಯದ ಉತ್ತರ ಕರ್ನಾಟಕಾದ್ಯಂತ ಕೆ.ಸಿ.ಎಫ್ ನ ಸಹಾಯದಲ್ಲಿ ಇಹ್ಸಾನ್ ಹೆಸರಲ್ಲಿ ನಡೆಸುತ್ತಿರುವ ದಅ್’ವ ಕಾರ್ಯಾಚರಣೆ ನಿಜಕ್ಕು ಅತ್ಯಾಧ್ಬುತ, ಆ ಕಾರ್ಯಾಚರಣೆಗೆ ನಾವೆಲ್ಲರೂ ಕೆ.ಸಿ.ಎಫ್ ನೊಂದಿಗೆ ಕೈ ಜೋಡಿಸುವುದು ಕಾಲದ ಬೇಡಿಕೆ ಎಂದು ಮನೋಜ್ಞವಾಗಿ ತಿಳಿಸಿದರು, ಇದೇ ಸಂದರ್ಭ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಇಹ್ಸಾನ್ ದಅ್’ವ ಕಾರ್ಯಾಚರಣೆಯನ್ನು ಪರದೆಯ ಮೂಲಕ ಸಭಿಕರಿಗೆ ಪ್ರದರ್ಶಿಸಲಾಯಿತು.‌‌

ಕಾರ್ಯಕ್ರಮದಲ್ಲಿ ಸಆದಿಯ ಅಲ್ ಹಸ್ಸ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಕುದಿರ್, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಪ್ರಕಾಶನ ಇಲಾಖೆ ಕಾರ್ಯದರ್ಶಿ ಅಶ್ರು ಬಜ್ಪೆ, ಅಲ್ ಅಹ್ಸಾ ಸೆಕ್ಟರ್ ಅಸ್ಸುಫ ಟ್ಯೂಟರ್ ಇಬ್ರಾಹಿಂ ಸಅದಿ,ಕೆಸಿಎಫ್ ರಾಷ್ಟ್ರೀಯ ನಾಯಕ ರಾದ ಹಾರಿಸ್ ಕಾಜೂರ್,ಇರ್ಷಾದ್ ಪಕ್ಷಿಕೆರೆ , ಝೋನ್ ನಾಯಕರಾದ ಶಂಸುದ್ದೀನ್ ಕೊಡಗು,ಇಸ್ಹಾಕ್ ಫಜೀರ್, ಮುಬಾರಾಜ್ ಯೂನಿಟ್ ಅಧ್ಯಕ್ಷ ಅಬ್ದುಲ್ಲಾ ಪುಲಬೆ,ಹುಫುಫ್ ಯೂನಿಟ್ ಅಧ್ಯಕ್ಷ ಅಬೂಬಕ್ಕರ್ ಕಿಲ್ಲೂರ್, ಅಹ್ಯಾತ್ ಹೋಟೆಲ್ ಮಾಲೀಕ ನಝೀರ್ ,ಮಲ್ಹರ್ ಸಂಸ್ಥೆಯ ಮನ್ಸೂರ್ ಮದನಿ, ಹಾಗೂ ಸುನ್ನೀ ಸಂಘ, ಸಂಸ್ಥೆಗಳ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com