janadhvani

Kannada Online News Paper

ಎಸ್ಸೆಸ್ಸೆಫ್ ತೌಡುಗೊಳಿ ಶಾಖೆ ವತಿಯಿಂದ ಇಫ್ತಾರ್ ಸಂಗಮ ಹಾಗೂ ಬದ್ರ್ ಮೌಲೂದ್ ಪಾರಾಯಣ

ಎಸ್ಸೆಸ್ಸೆಫ್ ತೌಡುಗೊಳಿ ಶಾಖೆ ವತಿಯಿಂದ ಇಫ್ತಾರ್ ಸಂಗಮವು ದಿನಾಂಕ 22 -05 -2019 ರಂದು ಬದ್ರಿಯಾ ಜುಮಾ ಮಸ್ಜಿದ್ ತೌಡುಗೊಳಿ ಸಭಾಂಗನದಲ್ಲಿ ನಡೆಯಿತು. ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್ ತೌಡುಗೊಳಿ ಕತೀಬರಾದ ಅಬ್ದುಲ್ ಹಮೀದ್ ಸಖಾಫಿ ಉಸ್ತಾದರ ದುಆದೊಂದಿಗೆ ಆರಂಭಗೊಂಡಿತು.ತದ ನಂತರ ಬದ್ರ್ ಮೌಲೂದ್ ಪಠಿಸಿ ಜುಮಾ ಮಸ್ಜಿದ್ ಖತೀಬರಾದ ಅಬ್ದುಲ್ ಹಮೀದ್ ಸಖಾಫಿ ಉಸ್ತಾದರು ಬದರ್ ದಿನದ ಮಹತ್ವವನ್ನು ವಿವರಿಸಿದರು.
ನಂತರ ಇಫ್ತಾರ್ ಕೂಟ ನಡಯಿತು.

ಕಾರ್ಯಕ್ರಮದಲ್ಲಿ ತೌಡುಗೊಳಿ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಟಿ. ಎಚ್, ಕಾರ್ಯದರ್ಶಿ ಶೇಕ್ಅಬ್ದುಲ ಬರೆಬಾಯಿ, ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಅಧ್ಯಕ್ಷರಾದ ಫಾರೂಕ್ ಸುನ್ನಂಗಳ, ಯೆಸ್.ವೈ.ಎಸ್ ಕಾರ್ಯದರ್ಶಿ ಹೈದರ್ ಮುಸ್ಲಿಯಾರ್, ಯೆಸ್.ವೈ.ಎಸ್ ತೌಡುಗೊಳಿ ಶಾಖಾ ಸದಸ್ಯರಾದ ಅಬ್ಬಾಸ್ ಸುನ್ನಂಗಳ, ಹಮೀದ್ ತೌಡುಗೊಳಿ ಸ್ಟಾರ್ ಆಟ್ಸ್&ಸ್ಪೋಟ್ಸ್ ತೊಡುಗೊಳಿ ಇದರ ಕಾರ್ಯದರ್ಶಿ ಸಿಹಾಬುದ್ದೀನ್ ತೌಡುಗೊಳಿ,
ಅಲ್ ಅಮಾನ್ ಜಿ.ಸಿ.ಸಿ ಸದಸ್ಯರಾದ ಹನೀಫ್ ತೌಡುಗೊಳಿ,ಇಬ್ರಾಹಿಂ , ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಸದಸ್ಯರಾದ ಮೊಯ್ದೀನ್ ಕುಂಞಿ ಬಲಪು,ಮುಸ್ತಫಾ ತೌಡುಗೊಳಿ, ಸಿದಿಕ್ ಬವಲಗುರಿ ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಮಸೂದ್ ಬಾಹ್ಶನಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಗಣ್ಯರಿಗೆ ಧನ್ಯವಾದವಿತ್ತರು. ಕೊನೆಯಲ್ಲಿ ಭೋಜನ ಕೂಟದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.

error: Content is protected !! Not allowed copy content from janadhvani.com