janadhvani

Kannada Online News Paper

SSF ಉಜಿರೆ ಸೆಕ್ಟರ್:ERRASE ಕ್ಯಾಂಪ್ ಹಾಗೂ ಬೃಹತ್ ಇಫ್ತಾರ್ ಕೂಟ

ಈ ವರದಿಯ ಧ್ವನಿಯನ್ನು ಆಲಿಸಿ


ಉಜಿರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಉಜಿರೆ ಸೆಕ್ಟರ್ ವತಿಯಿಂದ ಬದ್ರ್ ಸ್ಮರಣೆ,ತಹ್ಲೀಲ್ ಮಜ್ಲಿಸ್, ಕ್ಯಾಂಪಸ್ ವಿದ್ಯಾರ್ಥಿಗಳಿಗೆ “ERRASE” ಕ್ಯಾಂಪ್ ಹಾಗೂ ಬೃಹತ್ ಇಫ್ತಾರ್ ಕೂಟವು ದಿನಾಂಕ 25-05-2019ನೇ ಶನಿವಾರ SSF ಉಜಿರೆ ಸೆಕ್ಟರ್ ಕಛೇರಿಯಲ್ಲಿ ಅಧ್ಯಕ್ಷರಾದ ಇಕ್ಬಾಲ್ ಮಾಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉಪಾಧ್ಯಕ್ಷರಾದ ಹಮೀದ್ ಸ’ಅದಿ ಉದ್ಘಾಟಿಸಿದರು.ಕ್ಯಾಂಪಸ್ ವಿದ್ಯಾರ್ಥಿಗಳಿಗೆ “ERRASE” ಕ್ಯಾಂಪನ್ನು ತೀರ್ಥಹಳ್ಳಿ ಸರಕಾರಿ ಕಾಲೇಜು ಉಪನ್ಯಾಸಕರಾದ ಮಹಮ್ಮದ್ ಇಕ್ಬಾಲ್ ಮಾಸ್ಟರ್ ಮಾಚಾರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M.ಕೋಯ ತಂಗಳ್ BJM ಉಜಿರೆ ಟೌನ್ ಅಧ್ಯಕ್ಷರು ಅಬ್ದುರ್ರಹ್ಮಾನ್ ART,ಖತೀಬ್ ಅಶ್ರಫ್ ಹಿಮಮಿ,ಪ್ರ ಕಾರ್ಯದರ್ಶಿ ಬಶೀರ್ ಅಪ್ನಿ ಕೋಶಾಧಿಕಾರಿ ಮುಹಮ್ಮದ್ ತಾಜ್ ಇವರ ಪ್ರಾಯೊಜಿಕತ್ವ ದಲ್ಲಿ ಇಫ್ತಾರ್ ನ ಎಲ್ಲಾ ವ್ಯವಸ್ತೆ ಮಾಡಲಾಗಿತ್ತು,ಉಜಿರೆ ಸೆಕ್ಟರ್ ಸಮಿತಿ ಸದಸ್ಯರುಗಳು ಹಾಗೂ ಗೌಸಿಯ ಯಂಗ್ ಮೆನ್ಸ್ BJM ಉಜಿರೆ ಟೌನ್ ಸದಸ್ಯರುಗಳು ಉಪಸ್ಥಿತಿಯಿದ್ದರು.

SSF ಉಜಿರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಎಂ.ಮುಬೀನ್ ಉಜಿರೆ ಸ್ವಾಗತಿಸಿ ಸೆಕ್ಟರ್ ಸದಸ್ಯ ಬಾಸಿತ್ ಹಿಮಮಿ ಬೆಳಾಲ್ ವಂದಿಸಿದರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com