janadhvani

Kannada Online News Paper

ಅಬುಧಾಬಿ:ಪಾಸ್‌ಪೋರ್ಟ್ ಫೋಟೋದಲ್ಲಿ ಕಿವಿ ತೋರಿಸಬೇಕೆಂದು ವಿವಾದ ಸೃಷ್ಟಿಸಿದ ಬಿಎಲ್ಎಸ್

ಅಬುಧಾಬಿ: ಮುಸ್ಲಿಂ ಮಹಿಳೆಯರಿಗೆ ಪಾಸ್‌ಪೋರ್ಟ್ ಫೋಟೋದಲ್ಲಿ ಹಿಜಾಬ್ ಧರಿಸುವುದು ಸಮ್ಮತವಾಗಿದ್ದರೂ, ಕಿವಿ ಕಾಣುವಂತೆ ಹಿಜಾಬನ್ನು ಧರಿಸಬೇಕೆನ್ನುವ ವಿವಾದಾತ್ಮಕ ಕಾನೂನನ್ನು ಮತ್ತೊಮ್ಮೆ ಪಾಸ್‌ಪೋರ್ಟ್ ಸೇವಾ ಕೇಂದ್ರ (ಬಿ.ಎಲ್.ಎಸ್)ವು ತಂದಿದೆ. ಒಂದು ವರ್ಷದ ಹಿಂದೆ ಪಾಸ್‌ಪೋರ್ಟ್ ಫೋಟೋದಲ್ಲಿ ಕಿವಿ ಕಾಣುವಂತೆ ಹಿಜಾಬ್ ಧರಿಸಬೇಕೆನ್ನುವ ಕಾನೂನನ್ನು ವಿದೇಶಾಂಗ ಸಚಿವಾಲಯ ಜಾರಿಗೆ ತಂದಿತ್ತು. ಆದರೆ ಮುಖ ಮತ್ತು ಮುಂಗೈ ಬಿಟ್ಟು ಉಳಿದ ಅಂಗಾಂಗಗಳ ಪ್ರದರ್ಶನವನ್ನು ಇಸ್ಲಾಮಿಕ್ ಶರೀಅತ್ ಅನುಮತಿಸುವುದಿಲ್ಲ. ಸಾಂಕೇತಿಕ ಕಾರಣ ಮತ್ತು ವಿವಿಧ ವಲಯಗಳಿಂದ ಕೇಳಿಬಂದ ಪ್ರತಿಭಟನೆಯಿಂದಾಗಿ ಆ ಕಾನೂನನ್ನು ಮೊಟಕುಗೊಳಿಸಲಾಗಿತ್ತು.

ಜಾರಿಗೆ ತರದೆ ಉಳಿದಿದ್ದ ಕಾನೂನನ್ನು ಅಬುಧಾಬಿ ಇಂಡಿಯನ್ ದೂತಾವಾಸದ ಅಧೀನದಲ್ಲಿ ಪಾಸ್‌ಪೋರ್ಟ್ ಸೇವೆ ಒದಗಿಸುವ ಬಿಎಸ್‌ಎಲ್ ಮತ್ತೊಮ್ಮೆ ಕಡ್ಡಾಯಗೊಳಿಸಿದೆ. ಕಳೆದ ಒಂದು ತಿಂಗಳ ಮುಂಚೆ ಈ ಕಾನೂನನ್ನು ಜಾರಿಗೆ ತಂದಿರಲಿಲ್ಲ. ಪಾಸ್‌ಪೋರ್ಟ್ ನವೀಕರಣ ಮಾಡಲು ಇತ್ತೀಚೆಗೆ ಕೇಂದ್ರಕ್ಕೆ ತೆರಳಿದ ಮಹಿಳೆಯರಲ್ಲಿ ಕಿವಿಕಾಣುಂತೆ ಹಿಜಾಬ್ ಧರಿಸುವಂತೆ ಕಡ್ಡಾಯವಾಗಿ ತಿಳಿಸಲಾಗಿತ್ತು. ಅದು ಶರೀಅತ್‌ಗೆ ವಿರುದ್ದವಾಗಿದೆ ಎನ್ನುವುದನ್ನು ಅಲ್ಲಿನ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರೂ ಅದು ಸಚಿವಾಲಯದ ಸುತ್ತೊಲೆಯಾಗಿದ್ದು ಪಾಲಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ದುಬೈ ದೂತಾವಾಸದ ಅಧೀನದಲ್ಲಿ ಕಾರ್ಯಾಚರಿಸುವ ದುಬೈ ಮತ್ತು ಪರಿಸರದಲ್ಲಿ ಕಾರ್ಯಾಚರಿಸುವ ಬಿಎಸ್‌ಎಲ್ ಸೇವಾ ಕೇಂದ್ರಗಳಲ್ಲೂ ಇತರ ದೇಶಗಳಲ್ಲೂ, ಭಾರತದಲ್ಲೂ ಕಿವಿ ಕಾಣಿಸಬೇಕೆಂಬ ಕಾನೂನನ್ನು ಕಡ್ಡಾಯಗೊಳಿಸಲಾಗಿಲ್ಲ ಎನ್ನಲಾಗಿದೆ. ಆದರೆ ಸಿಖ್ ಧರ್ಮದವರಾದ ಪುರುಷರು ಪಾಸ್‌ಪೋರ್ಟ್ ಫೋಟೋದಲ್ಲಿ ಮುಂಡಾಸು ಧರಿಸುವುದರೊಂದಿಗೆ ಕಿವಿ ಕಾಣಿಸುವುದು ಕೂಡ ಅವರಿಗೆ ಆವಶ್ಯವಿಲ್ಲ.

ಶರೀಅತ್ ಕಾನೂನನ್ನು ಅಣಕಗೊಳಿಸುವುದು ಮತ್ತು ಎಲ್ಲೂ ಜಾರಿಗೆ ತರಲಾರದ ಕಾನೂನನ್ನು ಕಡ್ಡಾಯಗೊಳಿಸಲು ಹವಣಿಸುತ್ತಿರುವ ಎಂಬಸಿಯನ್ನು ಹಿಮ್ಮೆಟ್ಟಿಸಲು ಮುಂದಾಗಬೇಕೆಂದು ವಿದೇಶಾಂಗ ಸಚಿವಾಲಯಕ್ಕೆ ಒತ್ತಡ ಹೇರಲು ಅಬುಧಾಬಿಯ ವಿವಿಧ ಸಂಘಟನೆಗಳು ತಯಾರಿ ನಡೆಸಿವೆ.

ವಿವಾದಾತ್ಮಕ ನಿಲುವಿನಿಂದ ಹಿಂದೆ ಸರಿಯುವಂತೆ ಐಸಿಎಫ್ ಅಬುಧಾಬಿ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಪರಪ್ಪ ಸಂಬಂಧಿಸಿದ ಇಂಡಿಯನ್ ಕಾರ್ಯಾಲಯವನ್ನು ಕೋರಿದ್ದಾರೆ.

error: Content is protected !! Not allowed copy content from janadhvani.com