janadhvani

Kannada Online News Paper

ಗಲ್ಫ್ ರಾಷ್ಟ್ರಗಳಲ್ಲಿ ಮೇ.6 ಸೋಮವಾರದಿಂದ ರಮದಾನ್ ಆರಂಭ

ರಿಯಾದ್,ಮೇ.4: ಪವಿತ್ರ ರಮದಾನ್ ತಿಂಗಳನ್ನು ಸ್ವಾಗತಿಸಲು ಮುಸ್ಲಿಂ ಮನೆ ಮನಗಳು ಸಜ್ಜುಗೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಶನಿವಾರ ರಂಝಾನ್ ತಿಂಗಳ ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ಶಅಬಾನ್ 30 ಪೂರ್ತೀಕರಿಸಿ ಮೇ.6 ಸೋಮವಾರ ರಮದಾನ್ ಪ್ರಥಮ ದಿನವಾಗಿರುತ್ತದೆ ಎಂದು ಸೌದಿ, ಯುಎಇ, ಖತರ್, ಕುವೈತ್, ಬಹ್ರೈನ್ ಸಮೇತ ಎಲ್ಲಾ ಗಲ್ಫ್ ರಾಷ್ಟ್ರಗಳ ಔಖಾಫ್ ವ್ಯಕ್ತಪಡಿಸಿದೆ.

ಚಂದ್ರ ದರ್ಶನವನ್ನು ಆಧರಿಸಿ ಮುಸ್ಲಿಂ ಲೋಕ ಹಿಜರಿ ತಿಂಗಳನ್ನು ನಿರ್ಣಯಿಸುತ್ತದೆ.ಆದ್ದರಿಂದಲೇ ವಿವಿಧ ರಾಷ್ಟ್ರಗಳಲ್ಲಿ ರಮದಾನ್ ವ್ಯತ್ಯಸ್ತ ದಿನಗಳಲ್ಲಿ ಆರಂಭಗೊಂಡು ಈದ್ ಕೂಡಾ ವ್ಯತ್ಯಾಸಗೊಳ್ಳುತ್ತದೆ.

ಇಸ್ಲಾಮ್ ಧರ್ಮ ವಿಶ್ವಾಸಿಗಳು ಅನುಷ್ಠಿಸುವ ಕಡ್ಡಾಯ ಪಂಚ ಕಾರ್ಯಗಳಲ್ಲೊಂದಾಗಿದೆ ರಮದಾನ್ ವೃತ. ಜಾಗತಿಕ ಮುಸಲ್ಮಾನರು ಈ ತಿಂಗಳಲ್ಲಿ ಇತರ ದಿನಗಳಲ್ಲಿ ನಿರ್ವಹಿಸುವ ಐದು ಹೊತ್ತಿನ ನಮಾಜ್, ಇನ್ನಿತರ ಪ್ರಾರ್ಥನೆಯ ಹೊರತಾಗಿ ಹಗಲು ವೃತ ಅನುಷ್ಠಿಸಿ, ರಾತ್ರಿ ಹೊತ್ತು ಪ್ರತ್ಯೇಕ ನಮಾಜ್ (ತರಾವೀಹ್) ನಿರ್ವಹಿಸುತ್ತಾರೆ.

ಪವಿತ್ರ ಖುರ್ಆನ್ ಅವತೀರ್ಣಗೊಂಡ ತಿಂಗಳು ಎಂಬುದು ಇದರ ವಿಶೇಷತೆಯಾಗಿದೆ. ಈ ತಿಂಗಳಲ್ಲಿ ಮುಸಲ್ಮಾನರು ಹೇರಳವಾಗಿ ಪುಣ್ಯಕರ್ಮಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಾರೆ.ರಮದಾನಿನಲ್ಲಿ ಪಾಪಗಳನ್ನು ಮನ್ನಿಸಲ್ಪಡುತ್ತದೆ. ಪ್ರತಿಯೊಂದು ಪುಣ್ಯಕಾರ್ಯಕ್ಕೆ 70 ಪಟ್ಟು ಪ್ರತಿಫಲ ಲಭಿಸುತ್ತದೆ. ಈ ತಿಂಗಳಲ್ಲಿ ಲೈಲತುಲ್ ಖದ್ರ್ ಎಂಬ ವಿಶೇಷ ರಾತ್ರಿಯಿದೆ.

error: Content is protected !! Not allowed copy content from janadhvani.com