janadhvani

Kannada Online News Paper

ಕೆ.ಸಿ.ಎಫ್ ಸೀಬ್ ಝೋನ್ ವತಿಯಿಂದ ಕೆ.ಸಿ.ಎಫ್ ಡೇ ಆಚರಣೆ

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಅಧೀನದ ಸೀಬ್ ಝೋನ್ ವತಿಯಿಂದ ಕೆ.ಸಿಎಫ್ ಡೇ ಹಾಗೂ ಝೋನ್ ಮಟ್ಟದ ಸದಸ್ಯತ್ವ ಅಭಿಯಾನದ ತರಬೇತಿ ಕಾರ್ಯಗಾರವು ಬರ್ಕ ಅಲ್ ಫಲಾಹ್ ಮದ್ರಸದಲ್ಲಿ ಝೋನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹೆಚ್.ಕಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸ್ ತಂಙಳ್ ಎಮ್ಮೆಮ್ಮಾಡು ದುಆಃ ಗೈದರು.
ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಷಯ ಮಂಡಿಸಿ ಮಾತನಾಡಿದ ಕೆ.ಸಿ.ಎಫ್ ಅಂತರಾಷ್ಟ್ರೀಯ ಆಡಳಿತ ವಿಭಾಗದ ಅಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರು ಸಂಘಟನೆಯ ಹುಟ್ಟು, ಬೆಳವಣಿಗೆ, ಅನಿವಾರ್ಯತೆಯ ಕುರಿತು ಸವಿಸ್ತಾರವಾಗಿ ವಿವರಿಸಿ, ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಸೀಬ್ ಝೋನ್ ಉಸ್ತುವಾರಿ ಹಾರಿಸ್ ಕೊಳಕೇರಿ ಸದಸ್ಯತ್ವ ಅಭಿಯಾನದ ರೂಪು ರೇಷೆಗಳನ್ನು ವಿವರಿಸಿದರು.

ಸ್ವಾದಿಕ್ ಸುಳ್ಯ ಸ್ವಾಗತಿಸಿ, ಮುನೀರ್ ಮಧ್ಯನಡ್ಕ ವಂದಿಸಿದರು. ಸೀಬ್, ಮಬೇಲಾ, ಬರ್ಕ ಸೆಕ್ಟರ್ ಮತ್ತು ಯುನಿಟ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಒಮಾನ್ ಸದಸ್ಯತ್ವ ಅಭಿಯಾನ ಫೆಬ್ರವರಿ 8 ರಿಂದ ಮಾರ್ಚ್ 20 ರ ವರೆಗೆ ನಡೆಯಲಿದೆ.

error: Content is protected !! Not allowed copy content from janadhvani.com